ಕರ್ನಾಟಕ

karnataka

By

Published : Aug 17, 2021, 1:42 PM IST

ETV Bharat / state

ಮಂಗಳೂರಿನ ಎರಡು ಕಡೆ ವೀರ ಸಾವರ್ಕರ್ ನಾಮಕರಣದ ಅನಧಿಕೃತ ಬ್ಯಾನರ್ ಪತ್ತೆ

ಪಂಪ್‌ವೆಲ್‌ ಮೇಲ್ಸೇತುವೆ ಮತ್ತು ಕಂಕನಾಡಿ ರೈಲ್ವೆ ನಿಲ್ದಾಣದ ನಾಮಫಲಕದ ಬಳಿ "ವೀರ ಸಾವರ್ಕರ್ ಮೇಲ್ಸೇತುವೆ ಪಂಪ್‌ವೆಲ್" ಮತ್ತು "ವೀರ ಸಾವರ್ಕರ್ ರೈಲು ನಿಲ್ದಾಣ ಮಂಗಳೂರು" ಎಂಬ ಬ್ಯಾನರ್ ಹಾಕಿರುವುದು ಪತ್ತೆಯಾಗಿದೆ.

mangalore
ಸಾವರ್ಕರ್ ನಾಮಕರಣದ ಅನಧಿಕೃತ ಬ್ಯಾನರ್

ಮಂಗಳೂರು:ಪುತ್ತೂರಿನ ಕಬಕದಲ್ಲಿ ಸಾವರ್ಕರ್ ಫೋಟೋ ಇರುವ ಸ್ವಾತಂತ್ರ್ಯ ರಥಕ್ಕೆ ಎಸ್​ಡಿಪಿಐ ಕಾರ್ಯಕರ್ತರು ಅಡ್ಡಿಪಡಿಸಿದ ಬಳಿಕ ಮಂಗಳೂರು ನಗರದ ಎರಡು ಕಡೆಗಳಲ್ಲಿ ವೀರ ಸಾವರ್ಕರ್ ಹೆಸರಿನಲ್ಲಿ ಅನಧಿಕೃತ ಬ್ಯಾನರ್ ಅಳವಡಿಸಿದ ಘಟನೆ ನಿನ್ನೆ ರಾತ್ರಿ ನಡೆದಿದೆ.

ಪಂಪ್‌ವೆಲ್‌ ಮೇಲ್ಸೇತುವೆ ಮತ್ತು ಕಂಕನಾಡಿ ರೈಲ್ವೆ ನಿಲ್ದಾಣದ ನಾಮಫಲಕದ ಬಳಿ ಈ ಬ್ಯಾನರ್​ಗಳು ಕೆಲ ಹೊತ್ತು ಕಾಣಿಸಿಕೊಂಡಿದ್ದವು. ಪಂಪ್‌ವೆಲ್‌ ಮೇಲೆ "ವೀರ ಸಾವರ್ಕರ್ ಮೇಲ್ಸೇತುವೆ ಪಂಪ್‌ವೆಲ್" ಮತ್ತು ಮಂಗಳೂರು ಜಂಕ್ಷನ್ ರೈಲು ನಿಲ್ದಾಣಕ್ಕೆ ಹೋಗುವ ರಸ್ತೆ ಬಳಿ "ವೀರ ಸಾವರ್ಕರ್ ರೈಲು ನಿಲ್ದಾಣ ಮಂಗಳೂರು" ಎಂಬ ಬ್ಯಾನರ್ ಹಾಕಲಾಗಿತ್ತು.

ಈ ಎರಡು ಬ್ಯಾನರ್​ಅ​ನ್ನು ಕೆಲಹೊತ್ತಿನ ಬಳಿಕ ಅಪರಿಚಿತರು ತೆರವುಗೊಳಿಸಿದ್ದಾರೆ. ವರ್ಷಗಳ ಹಿಂದೆ ಪಂಪ್‌ವೆಲ್‌ ಮೇಲ್ಸೇತುವೆಯ ಮೇಲೆ ಇದೇ ರೀತಿಯ ಬ್ಯಾನರ್ ಕಾಣಿಸಿಕೊಂಡಿತ್ತು.

ABOUT THE AUTHOR

...view details