ಸುಬ್ರಹ್ಮಣ್ಯ (ದ.ಕ):ದಂಪತಿಯ ಮೇಲೆ ದಾಳಿ ಮಾಡಿ ಬಳಿಕ ಮರವೇರಿ ಕುಳಿತಿದ್ದ ಚಿರತೆಯನ್ನು ಯಶಸ್ವಿಯಾಗಿ ಅರಣ್ಯ ಇಲಾಖೆ ಸೆರೆಹಿಡಿದಿದೆ. ಸುಮಾರು 4-5 ವರ್ಷದ ಚಿರತೆ ಇದಾಗಿದ್ದು, ದಂಪತಿ ಮೇಲೆ ದಾಳಿಗೆ ಮುಂದಾಗಿ ಬಳಿಕ ಮರದಲ್ಲಿ ಕುಳಿತಿತ್ತು.
ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಗೆ ಅರವಳಿಕೆ ಚುಚ್ಚು ಮದ್ದು ನೀಡಿದ್ದರು. ಆದರೆ ಈ ವೇಳೆ ಮರದಲ್ಲಿಯೇ ಚಿರತೆ ಸಿಲುಕಿತ್ತು. ಬಳಿಕ ಮರದ ಕೆಳಗೆ ಬಲೆ ಹಾಕಿ ಮರವನ್ನು ಕಡಿದು ಚಿರತೆ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ನೆಟ್ಟಣ ಫಾರೆಸ್ಟ್ ಡಿಪೋದಲ್ಲಿ ಚಿರತೆಗೆ ಚಿಕಿತ್ಸೆ ನೀಡಲಾಗುತ್ತಿದೆ.
ಈ ಕುರಿತು ಮಾತನಾಡಿದ ಡಿಎಫ್ಒ ಕರಿಕಾಳನ್, ಚಿರತೆ ಈಗ ಆರೋಗ್ಯವಾಗಿದೆ. ಅದನ್ನು ಪಿಳಿಕುಲ ಪ್ರಾಣಿ ಸಂಗ್ರಾಹಾಲಯಕ್ಕೆ ಬಿಡಬೇಕೋ ಅಥವಾ ಅರಣ್ಯಕ್ಕೆ ಬಿಡಬೇಕೋ ಎಂಬ ಬಗ್ಗೆ ತೀರ್ಮಾನವಾಗಿಲ್ಲ ಎಂದಿದ್ದಾರೆ.