ಬಂಟ್ವಾಳ:ಮಿನಿ ವಿಧಾನಸೌಧದಲ್ಲಿ ಲಿಫ್ಟ್ ಕೈ ಕೊಟ್ಟ ಪರಿಣಾಮ ಸರ್ವೇ ಇಲಾಖೆಯ ಮಹಿಳಾ ಸಿಬ್ಬಂದಿಯೋರ್ವರು ಸುಮಾರು ಅರ್ಧ ಗಂಟೆ ಕಾಲ ಲಿಫ್ಟ್ ಒಳಗೆ ಸಿಲುಕಿದ್ದ ಘಟನೆ ನಡೆದಿದೆ.
ಕೈ ಕೊಟ್ಟ ಲಿಫ್ಟ್: ಅರ್ಧ ಗಂಟೆ ಒಳಗೆ ಸಿಲುಕಿದ ಮಹಿಳಾ ಸಿಬ್ಬಂದಿ! - mini vidhana soudha news
ಮಿನಿ ವಿಧಾನಸೌಧದಲ್ಲಿರುವ ವಯಸ್ಸಾದವರು, ಅಶಕ್ತರಿಗೆಂದು ನಿರ್ಮಿಸಲಾದ ಲಿಫ್ಟ್ನಲ್ಲಿ ಸುಮಾರು ಅರ್ಧ ಗಂಟೆಗಳ ಕಾಲ ಮಹಿಳಾ ಸಿಬ್ಬಂದಿಯೋರ್ವರು ಸಿಲುಕಿದ್ದ ಘಟನೆ ನಡೆದಿದೆ.
ಮಿನಿ ವಿಧಾನಸೌಧದಲ್ಲಿರುವ ವಯಸ್ಸಾದವರು, ಅಶಕ್ತರಿಗೆಂದು ನಿರ್ಮಿಸಲಾದ ಲಿಫ್ಟ್ನಲ್ಲಿ ಸಿಲುಕಿ ಆತಂಕಕ್ಕೆ ಒಳಗಾದ ಘಟನೆ ನಡೆಯಿತು. ಈ ಲಿಫ್ಟ್ ಆಗಾಗ ವಿದ್ಯುತ್ ಪೂರೈಕೆ ಇಲ್ಲದೆ ಕೈ ಕೊಟ್ಟು ಸುದ್ದಿಯಾಗುತ್ತಿತ್ತು. ಆದರೆ ವರ್ಷದಿಂದೀಚೆಗೆ ಆ ಸಮಸ್ಯೆ ಇರಲಿಲ್ಲ.
ಎಂದಿನಂತೆ ಮಹಿಳಾ ಸಿಬ್ಬಂದಿ ಲಿಫ್ಟ್ ಒಳಗೆ ಹೋದಾಗ ಲಿಫ್ಟ್ ಬಂದ್ ಆಗಿದೆ. ಮುಂದೇನು ಮಾಡುವುದು ಎಂದು ತಿಳಿಯದೆ ಗಲಿಬಿಲಿಗೊಂಡ ಮಹಿಳೆ, ಸಹೋದ್ಯೋಗಿಗಳ ನೆರವು ಕೋರಿದ್ದಾರೆ. ನಂತರ ಸ್ಥಳಕ್ಕೆ ಆಗಮಿಸಿದ ಸಾರ್ವಜನಿಕರಿಂದ ಲಿಫ್ಟ್ ತೆರೆಯುವ ಪ್ರಯತ್ನ ನಡೆಯಿತು. ಅಂತಿಮವಾಗಿ ಸುಮಾರು ಅರ್ಧ ಗಂಟೆಗಳ ನಂತರ ಲಿಫ್ಟ್ ತೆರೆದು ಸಿಬ್ಬಂದಿಯನ್ನು ಹೊರಕ್ಕೆ ಕರೆ ತರಲಾಯಿತು.