ಬಂಟ್ವಾಳ (ದಕ್ಷಿಣ ಕನ್ನಡ):ಕೇರಳ ಮತ್ತು ಕರ್ನಾಟಕದಲ್ಲಿ ಹಲವು ಕೃತ್ಯಗಳನ್ನು ಎಸಗಿದ ಆರೋಪವುಳ್ಳ ದ್ವಿಚಕ್ರ ವಾಹನ ಕಳವು ಪ್ರಕರಣಗಳ ಆರೋಪಿಯೊಬ್ಬನನ್ನು, ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಸಂಶಯದ ಮೇಲೆ ಬಂಧಿಸಿದ ಪೊಲೀಸರು ಬಂಧಿತನಿಂದ ಕಳವುಗೈದ ದ್ವಿಚಕ್ರ ವಾಹನವೊಂದನ್ನು ವಶಪಡಿಸಿಕೊಂಡರು.
ಬಂಟ್ವಾಳ: ಎರಡು ವಾರಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ಆರೋಪಿ ಮತ್ತೆ ಅಂದರ್
ಎರಡು ವಾರಗಳ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆ ಹೊಂದಿದ್ದ, ಕೇರಳ ಮತ್ತು ಕರ್ನಾಟಕದಲ್ಲಿ ಹಲವು ಕೃತ್ಯಗಳನ್ನು ಎಸಗಿದ ಆರೋಪವುಳ್ಳ ವ್ಯಕ್ತಿಯೊಬ್ಬನನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕೇರಳ ಮಂಗಲ್ಪಾಡಿ ನಿವಾಸಿ ಆಶ್ರಪ್ ಆಲಿ ಬಂಧಿತ ಆರೋಪಿ. ಗ್ರಾಮಾಂತರ ಠಾಣಾ ಪೊಲೀಸರು ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದ ವೇಳೆ ಪೊಳಲಿ ಬಸ್ ನಿಲ್ದಾಣದಲ್ಲಿ ವ್ಯಕ್ತಿಯೋರ್ವ ದ್ವಿಚಕ್ರವಾಹನ ನಿಲ್ಲಿಸಿ ನಿಂತುಕೊಂಡಿದ್ದ. ಪೊಲೀಸ್ ಜೀಪ್ ಕಂಡು ಆರೋಪಿ ಓಡಿ ಹೋಗಲು ಪ್ರಯತ್ನಿಸಿದ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆತನನ್ನು ಹಿಡಿದು ವಿಚಾರಣೆ ನಡೆಸಿದಾಗ ಅಡ್ಡೂರಿನಿಂದ ಕಳವು ಮಾಡಿದ ದ್ವಿಚಕ್ರ ವಾಹನದ ಬಗ್ಗೆ ಮಾಹಿತಿ ನೀಡಿದ್ದಾನೆ.
ಈತನ ವಿರುದ್ಧ ಉಳ್ಳಾಲ, ಕೋಣಾಜೆ ಸಹಿತ ಅನೇಕ ಪೊಲೀಸ್ ಠಾಣೆಗಳಲ್ಲಿ ಕಳವು ಆರೋಪದ ಪ್ರಕರಣಗಳು ದಾಖಲಾಗಿವೆ. ಈಗಾಗಲೇ ಕಳವು ಪ್ರಕರಣವೊಂದರಲ್ಲಿ ಜೈಲು ಸೇರಿದ್ದ, ಈತ ಎರಡು ವಾರಗಳ ಹಿಂದೆ ಜೈಲಿನಿಂದ ಬಿಡುಗಡೆ ಆಗಿದ್ದ. ಬಿಡುಗಡೆಯಾದ ಕೂಡಲೇ ಈತ ಹಳೆಯ ಚಾಳಿಯನ್ನು ಮುಂದುವರಿಸಿದ್ದು, ಅಡ್ಡೂರು ಎಂಬಲ್ಲಿನ ದ್ವಿಚಕ್ರ ವಾಹನವನ್ನು ಕಳವು ಮಾಡಿದ್ದಾಗಿ ಆರೋಪಿಸಲಾಗಿದೆ.