ಬಂಟ್ವಾಳ:ತಾಲೂಕಿನ ಅಮ್ಟಾಡಿ ಗ್ರಾಮದ ಬಾಂಬಿಲ ಕೆಂಪುಗುಡ್ಡೆ ಎಂಬಲ್ಲಿ ಅಕ್ರಮ ಕೆಂಪು ಕಲ್ಲಿನ ಕ್ವಾರಿ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಪಡೆದ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ನೇತೃತ್ವದ ತಂಡ ದ.ಕ.ಜಿಲ್ಲಾಧಿಕಾರಿ ಸೂಚನೆ ಮೇರೆಗೆ ದಾಳಿ ನಡೆಸಿದೆ.
ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ಕೆಂಪು ಕಲ್ಲಿನ ಕ್ವಾರಿಗೆ ತಹಸೀಲ್ದಾರ್ ನೇತೃತ್ವದಲ್ಲಿ ದಾಳಿ
ಬಂಟ್ವಾಳದ ಕೆಂಪುಗುಡ್ಡೆ ಎಂಬಲ್ಲಿ ಅಕ್ರಮ ಕೆಂಪು ಕಲ್ಲಿನ ಕ್ವಾರಿ ನಡೆಯುತ್ತಿದ್ದ ಅಡ್ಡೆ ಮೇಲೆ ಬಂಟ್ವಾಳ ತಹಶೀಲ್ದಾರ್ ನೇತೃತ್ವದ ತಂಡ ದಾಳಿ ನಡೆಸಿದೆ.
ಈ ಭಾಗದಲ್ಲಿ ಕೆಂಪು ಕಲ್ಲಿನ ಕ್ವಾರಿ ನಡೆಸಲು ಅನುಮತಿ ಇಲ್ಲದಿದ್ದರೂ ಅಕ್ರಮವಾಗಿ ಕಾರ್ಯಾಚರಿಸಲಾಗುತ್ತಿದೆ ಎಂಬ ಕಾರಣ ಈ ದಾಳಿ ನಡೆದಿದೆ. ಸ್ಥಳದಲ್ಲಿ ಕಲ್ಲು ತೆಗೆಯಲು ಬಳಸುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ಭಾರಿ ಗಾತ್ರದ 2 ಕಟ್ಟಿಂಗ್ ಯಂತ್ರ 1 ಟಿಲ್ಲರ್ ಹಾಗೂ ಇತರ ಸೊತ್ತುಗಳನ್ನು ವಶಕ್ಕೆ ಪಡೆದು ಕೊಂಡರು.
ಕಾರ್ಯಾಚರಣೆಯಲ್ಲಿ ಬಂಟ್ವಾಳ ಕಂದಾಯ ನಿರೀಕ್ಷಕ ನವೀನ್ ಬೆಂಜನಪದವು, ಗ್ರಾಮ ಲೆಕ್ಕಾಧಿಕಾರಿ ಅಮೃತಾಂಶು, ಪಿ.ಡಿ.ಒ. ರವಿ, ಕಾರ್ಯದರ್ಶಿ ಲಕ್ಷ್ಮೀ ನಾರಾಯಣ, ಬಿಲ್ ಕಲೆಕ್ಟರ್ ಚೇತನ್, ತಾಲೂಕು ಕಚೇರಿ ಸಿಬ್ಬಂದಿ ಲೋಕನಾಥ್, ಸಂದೀಪ್ ಕುರಿಯಾಳ ಭಾಗವಹಿಸಿದ್ದರು.