ಕರ್ನಾಟಕ

karnataka

ETV Bharat / state

ಪ್ರವೀಣ್ ಹತ್ಯೆ ಪ್ರಕರಣ: ಸ್ಥಳ ಮಹಜರು ಮಾಡಿದ ಸುಳ್ಯ ಪೊಲೀಸರು - ಈಟಿವಿ ಭಾರತ ಕನ್ನಡ

ಪ್ರವೀಣ್ ಹತ್ಯೆಯ ಪ್ರಮುಖ ಆರೋಪಿಗಳನ್ನು ಕೊಲೆಯಾದ ಸ್ಥಳಕ್ಕೆ ಕರೆದುಕೊಂಡು ಬಂದು ಸ್ಥಳ ಮಹಜರು ನಡೆಸಲಾಗಿದೆ.

ಪ್ರವೀಣ್ ಹತ್ಯೆ ಪ್ರಕರಣ: ಸ್ಥಳ ಮಹಜರು ಮಾಡಿದ ಪೊಲೀಸರು
ಪ್ರವೀಣ್ ಹತ್ಯೆ ಪ್ರಕರಣ: ಸ್ಥಳ ಮಹಜರು ಮಾಡಿದ ಪೊಲೀಸರು

By

Published : Aug 11, 2022, 4:26 PM IST

ಸುಳ್ಯ: ರಾಷ್ಟ್ರ ಮಟ್ಟದಲ್ಲೇ ಸಂಚಲನ ಸೃಷ್ಟಿಸಿದ್ದ ಬೆಳ್ಳಾರೆಯ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಮೂವರು ಪ್ರಮುಖ ಅರೋಪಿಗಳ ಬಂಧನವಾಗಿದೆ. ಈ ಆರೋಪಿಗಳೊಂದಿಗೆ ಇಂದು ಪೊಲೀಸರು ಸ್ಥಳ ಮಹಜರು ಮಾಡಿದರು.

ಹತ್ಯೆಯ ಪ್ರಮುಖ ಆರೋಪಿಗಳಾದ ಶಿಯಾಬ್, ರಿಯಾಜ್, ಬಶೀರ್‌ನನ್ನು ಪೊಲೀಸರು ಬಿಗಿ ಬಂದೋಬಸ್ತ್‌ನಲ್ಲಿ ಕೊಲೆಯಾದ ಸ್ಥಳಕ್ಕೆ ಕರೆದುಕೊಂಡು ಬಂದು ಸ್ಥಳ ಮಹಜರು ನಡೆಸಿದ್ದಾರೆ.

ಪ್ರವೀಣ್ ಅವರ ಬೆಳ್ಳಾರೆ ಸಮೀಪದ ಮಾಸ್ತಿಕಟ್ಟೆಯಲ್ಲಿರುವ ಅಕ್ಷಯ ಚಿಕನ್ ಸೆಂಟರ್ ಮುಂದೆಯೇ ಕೊಲೆ ನಡೆದಿತ್ತು. ಪುತ್ತೂರು ಡಿವೈಎಸ್ಪಿ ಗಾನಾ.ಪಿ ಕುಮಾರ್ ಅವರ ನೇತೃತ್ವದ ಪೋಲಿಸರ ತಂಡದಿಂದ ಸ್ಥಳ ಮಹಜರು ಕಾರ್ಯ ಜರುಗಿದೆ.

ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಗೈದ ಪ್ರಮುಖ ಮೂವರು ಆರೋಪಿಗಳು ಅರೆಸ್ಟ್

ABOUT THE AUTHOR

...view details