ಕರ್ನಾಟಕ

karnataka

ETV Bharat / state

ದುಬಾರಿ ಬೆಲೆ ಬೈಕ್​ ಕೊಡಿಸದ ತಂದೆ.. ಬಾವಿಗೆ ಹಾರಿ ಪ್ರಾಣ ಬಿಟ್ಟ ಮಗ? - ದುಬಾರಿ ಬೆಲೆಯ ಬೈಕ್ ಕೊಡಿಸದಿದ್ದಕ್ಕೆ ಮಗ ಆತ್ಮಹತ್ಯೆ

ದುಬಾರಿ ಬೆಲೆಯ ಬೈಕ್​ ಕೊಡಿಸದಿದ್ದಕ್ಕೆ ಮನನೊಂದ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಬಾವಿಗೆ ಹಾರಿ ಪ್ರಾಣ ಬಿಟ್ಟ ಮಗ?
ಬಾವಿಗೆ ಹಾರಿ ಪ್ರಾಣ ಬಿಟ್ಟ ಮಗ?

By

Published : Jul 23, 2021, 9:28 AM IST

ಮಂಗಳೂರು: ತಂದೆ ನಾಲ್ಕು ಲಕ್ಷ ರೂ. ಬೈಕ್ ತೆಗೆದುಕೊಟ್ಟಿಲ್ಲ ಎಂದು ಮನನೊಂದ ಯುವಕ ಬಾವಿಗೆ ಹಾರಿ ಪ್ರಾಣ ಕಳೆದುಕೊಂಡಿರುವ ಘಟನೆ ಮುಲ್ಕಿ ಠಾಣಾ ವ್ಯಾಪ್ತಿಯ ಕಿನ್ನಿಗೋಳಿ ಬಳಿ ನಡೆದಿದೆ. ರಾಹುಲ್ ಕಾಲಿನ್ ಫರ್ನಾಂಡೀಸ್ ಮೃತ ದುರ್ದೈವಿಯಾಗಿದ್ದಾನೆ.

ಬುಧವಾರ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ರಾಹುಲ್​ ರೂಂಗೆ ಅವರ ತಾಯಿ ಬಂದಾಗ ಮಗ ಕಾಣಿಸಲಿಲ್ಲ. ಸುತ್ತ ಮುತ್ತ ಹುಡುಕಿದರೂ, ಪುತ್ರ ಕಾಣಿಸದಿದ್ದಾಗ ಪೋಷಕರು ಗಾಬರಿಯಾಗಿದ್ದಾರೆ. ಕೊನೆಗೆ ರಾಹುಲ್ ಮೃತದೇಹ ಬಾವಿಯಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಮುಲ್ಕಿ ಠಾಣಾ ಪೊಲೀಸರು, ರಾಹುಲ್ ತಂದೆ ಬೈಕ್​ ಕೊಡಿಸದಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಿದ್ದಾರೆ.

ಇದನ್ನೂ ಓದಿ: ರಾಯಚೂರು: ಐದು ವರ್ಷಗಳ ನಂತರ ಕೊಲೆ ಪ್ರಕರಣದ ಆರೋಪಿ ಅಂದರ್​!

ರಾಹುಲ್​ ಕಳೆದ ಹಲವು ದಿನಗಳಿಂದ ನನಗೆ 4 ಲಕ್ಷ ರೂ.ಮೌಲ್ಯದ ಬೈಕ್​ ಕೊಡಿಸುವಂತೆ ತಂದೆಯನ್ನು ಪೀಡಿಸುತ್ತಿದ್ದನಂತೆ. ಇನ್ನೂ ತನ್ನ ಮೊಬೈಲ್​​ನಲ್ಲಿ ಫೇಸ್​ಬುಕ್​ ಹಾಗೂ ವಾಟ್ಸ್​ಆ್ಯಪ್​​​ ಗಳನ್ನು ಡಿಲೀಟ್ ಮಾಡಿದ್ದಾನೆ ಎನ್ನಲಾಗಿದ್ದು, ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details