ಮಂಗಳೂರು: ಕಾರು ಮತ್ತು ಬೈಕ್ಗಳಲ್ಲಿ ಆಭರಣಗಳ ಅಂಗಡಿಗಳಿಗೆ ಬಂದು ಚಿನ್ನ ಖರೀದಿಸಿ ಹೊರಬರುವ ಗ್ರಾಹಕರನ್ನು ಅಡ್ಡಗಟ್ಟಿ ಬೆದರಿಸಿ ಸುಲಿಗೆ ಮಾಡುವ ಆರು ಮಂದಿ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಕಾರ್‌ಸ್ಟ್ರೀಟ್‌ನ ಬಿಇಎಂ ಹೈಸ್ಕೂಲ್ ಸಮೀಪ ಕೃತ್ಯ ಎಸಗಲು ಹೊಂಚು ಹಾಕುತ್ತಿದ್ದ ವೇಳೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪುತ್ತೂರು ತಾಲ್ಲೂಕಿನ ಉಪ್ಪಿನಂಗಡಿ ಗ್ರಾಮದ ಅಬ್ದುಲ್ ಮಜೀದ್ ಹೆಚ್(32), ಬಂಟ್ವಾಳ ತಾಲೂಕಿನ ಪುದು ಗ್ರಾಮದ ಸೈಯದ್ ಅಲಿಯಾಸ್ ಮೊಹಮ್ಮದ್ ಮೋನು(31),ಕೆದಿಲ ಗ್ರಾಮದ ಮೊಹಮ್ಮದ್ ಶಾಫಿ ಅಲಿಯಾಸ್ ಶಾಫಿ(24), ಕೂಲ್ನಾಡು ಗ್ರಾಮದ ಆಸೀಫ್ ಕೆ.(25), ಪೆರಾಜೆ ಗ್ರಾಮದ ಮೊಹಮ್ಮದ್ ನಾಸೀರ್(20),ಅಹಮ್ಮದ್ ಬಶೀರ್ ಅಲಿಯಾಸ್ ಬಶೀರ್(29), ಮನ್ಸೂರ್ ಅಲಿ ಅಲಿಯಾಸ್ ಮನ್ಸೂರ್ (30) ಬಂಧಿತ ಆರೋಪಿಗಳಾಗಿದ್ದಾರೆ.