ಕರ್ನಾಟಕ

karnataka

ETV Bharat / state

ಪಾರ್ಸಲ್ ಪಡೆಯಲು ಬಂದ ಬಾಲಕನ ಮೇಲೆ ಕಾಮುಕನಿಂದ ಲೈಂಗಿಕ ದೌರ್ಜನ್ಯ - etv bharat kannada

ಪಾರ್ಸಲ್ ಪಡೆಯಲು ಬಂದಿದ್ದ ಅಪ್ರಾಪ್ತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಬೆದರಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

sexual-harassment-on-boy-in-bantwala
ಪಾರ್ಸಲ್ ಪಡೆಯಲು ಬಂದ ಬಾಲಕನ ಮೇಲೆ ಕಾಮುಕನಿಂದ ಲೈಂಗಿಕ ದೌರ್ಜನ್ಯ

By

Published : Oct 5, 2022, 8:42 PM IST

ಬಂಟ್ವಾಳ: ಪಾರ್ಸಲ್ ಪಡೆಯಲು ಬಂದಿದ್ದ ಅಪ್ರಾಪ್ತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಬೆದರಿಸಿರುವ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಲ್ಲಡ್ಕದ ಕೋಳಿ ಟಿಕ್ಕಾ ಮಾರಾಟದ ಅಂಗಡಿಯೊಂದರ ಮಾಲೀಕ ಮಹಮ್ಮದ್ ಅಶ್ರಫ್ ಎಂಬಾತನ ವಿರುದ್ಧ ದೂರು ನೀಡಲಾಗಿದೆ.

ಬಾಲಕ ಟಿಕ್ಕಾ ಪಾರ್ಸಲ್ ಕೇಳಿದಾಗ, ಕೊಂಡುಹೋಗಲು ಪ್ಲಾಸ್ಟಿಕ್ ಚೀಲ ತರುವಂತೆ ಹೇಳಿದ ಅಂಗಡಿಯ ಮಾಲೀಕ ಬಳಿಕ ಒಳಗೆ ಬರುವಂತೆ ಕರೆದಿದ್ದಾನೆ. ಆಗ ಆರೋಪಿಯು ಬಾಲಕನ ಹಿಂದಿನಿಂದ ಹೋಗಿ ಆತನನ್ನು ಹಿಡಿದು ಸಮೀಪದ ತೋಟಕ್ಕೆ ಎತ್ತಿಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರಲಾಗಿದೆ.

ಈ ಘಟನೆ ನಡೆದು ಎರಡು ತಿಂಗಳಾಗಿದ್ದು, ಬಳಿಕ ಮತ್ತೊಮ್ಮೆ ದೌರ್ಜನ್ಯ ಎಸಗಲು ಪ್ರಯತ್ನಿಸಿದ್ದಾನೆ. ಆಗ ಬಾಲಕ ವಿರೋಧ ವ್ಯಕ್ತಪಡಿಸಿದಾಗ, ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಕುರಿತಂತೆ ಪ್ರಕರಣ ದಾಖಲಿಸಿಕೊಂಡ ಬಂಟ್ವಾಳ ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಲೋಹರ್ಡಗಾ: ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ.. ಇಬ್ಬರು ಪೊಲೀಸರೇ ಆರೋಪಿಗಳು

ABOUT THE AUTHOR

...view details