ಕರ್ನಾಟಕ

karnataka

By

Published : Oct 8, 2020, 3:31 PM IST

ETV Bharat / state

ಸುಳ್ಯದ ಸಚಿನ್ ಪ್ರತಾಪ್​ಗೆ ಭಾರತ ಕಬಡ್ಡಿ ತಂಡದಲ್ಲಿ ಅವಕಾಶ ಕಲ್ಪಿಸಲು ಸಮ್ಮತಿ

ನಿಮ್ಮ ಆಯ್ಕೆ ಪ್ರಕ್ರಿಯೆಗೆ ತಡೆ ನೀಡಲಾಗಿದೆ ಎಂದು ಉತ್ತರ ದೆಹಲಿ ರಾಷ್ಟ್ರೀಯ ಅಮೆಚೂರ್‌ ಅಸೋಸಿಯೇಷನ್‌ನಿಂದ ಪ್ರತಿಕ್ರಿಯೆ ನೀಡಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಅವರು ಕಬಡ್ಡಿ ಅಸೋಸಿಯೇಷನ್‌ನ ಸಿಇಒ ಜತೆಗೆ ಚರ್ಚಿಸಿದ್ದು, ಅವರಿಂದ ಪೂರಕ ಸ್ಪಂದನೆ ಸಿಕ್ಕಿದೆ.

ಸಚಿನ್ ಪ್ರತಾಪ್
ಸಚಿನ್ ಪ್ರತಾಪ್

ಮಂಗಳೂರು: ಭಾರತ ಕಬಡ್ಡಿ ತಂಡದ ಹಿರಿಯರ ವಿಭಾಗದ ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ ಆಯ್ಕೆಯಾಗಿ, ಮೊದಲನೇ ಹಂತದ ಆನ್‌ಲೈನ್ ತರಬೇತಿ ಶಿಬಿರದಿಂದ ಕೈಬಿಡಲಾಗಿದ್ದ ಸುಳ್ಯದ ಸಚಿನ್ ಪ್ರತಾಪ್ ಅವರಿಗೆ ತಂಡದಲ್ಲಿ ಅವಕಾಶ ಕಲ್ಪಿಸಲು ದೆಹಲಿಯ ರಾಷ್ಟ್ರೀಯ ಕಬಡ್ಡಿ ಅಸೋಸಿಯೇಷನ್ ಈಗ ಸಮ್ಮತಿಸಿದೆ.

ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದ ಪಾಲೆಪ್ಪಾಡಿ ನಿವಾಸಿ ಸಚಿನ್‌ ಪ್ರತಾಪ್‌ ಅವರಿಗೆ ಮೊದಲ ಹಂತದ ಆನ್‌ಲೈನ್‌ ತರಬೇತಿಯಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿರಲಿಲ್ಲ. ನಿಮ್ಮ ಆಯ್ಕೆ ಪ್ರಕ್ರಿಯೆಗೆ ತಡೆ ನೀಡಲಾಗಿದೆ ಎಂಬ ಉತ್ತರ ದೆಹಲಿ ರಾಷ್ಟ್ರೀಯ ಅಮೆಚೂರ್‌ ಅಸೋಸಿಯೇಷನ್‌ನಿಂದ ಬಂದಿತ್ತು. ಈ ಬಗ್ಗೆ ಮಾಹಿತಿ ಪಡೆದ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಕಬಡ್ಡಿ ಅಸೋಸಿಯೇಷನ್‌ನ ಸಿಇಒ ಜತೆಗೆ ಚರ್ಚಿಸಿದ್ದು, ಪೂರಕ ಸ್ಪಂದನೆ ವ್ಯಕ್ತವಾಗಿದೆ.

ಕಬಡ್ಡಿ ಅಟಗಾರ ಸಚಿನ್‌ ಪ್ರತಾಪ್

ಉಜಿರೆ ಕಾಲೇಜಿನ ವಿದ್ಯಾರ್ಥಿ ಆಗಿರುವ ಸಚಿನ್ ಅವರನ್ನು ತರಬೇತಿ ಪಟ್ಟಿಯಿಂದ ಕೈ ಬಿಟ್ಟಿರುವ ಬಗ್ಗೆ ಈ ಹಿಂದೆ 'ಈಟಿವಿ ಭಾರತ' ಕೂಡ ವರದಿ ಮಾಡಿತ್ತು.

ಇದನ್ನು ಓದಿ:ರಾಷ್ಟ್ರೀಯ ಕಬಡ್ಡಿ ತಂಡಕ್ಕೆ ಆಯ್ಕೆಯಾದರೂ ತರಬೇತಿಗಿಲ್ಲ ಆಹ್ವಾನ: ಕನ್ನಡಿಗರಿಗೆ ಅನ್ಯಾಯ ಆರೋಪ

ABOUT THE AUTHOR

...view details