ಕರ್ನಾಟಕ

karnataka

ಜಾನುವಾರು ಕಳ್ಳ ಸಾಗಣೆದಾರರಿಗೆ ಖಡಕ್​ ವಾರ್ನಿಂಗ್​:  ಅಪರಾಧಿಗಳ ಪರೇಡ್

ಗೋ ಕಳ್ಳರನ್ನು ಮಟ್ಟಹಾಕಲು ನಗರ ಪೊಲೀಸ್ ಇಲಾಖೆ ಗಂಭೀರ ಪ್ರಯತ್ನ ನಡೆಸುತ್ತಿದೆ. ಇಂದು ಬೆಳ್ಳಂಬೆಳಗ್ಗೆ ಅಕ್ರಮ ಜಾನುವಾರು ಸಾಗಣೆದಾರರ ಪರೇಡ್ ನಡೆಸಿದ ನಗರ ಪೊಲೀಸ್ ಆಯುಕ್ತರು ಅವರೆಲ್ಲರಿಗೂ ಎಚ್ಚರಿಕೆ ನೀಡಿದ್ದಾರೆ.

By

Published : Jul 2, 2019, 2:22 PM IST

Published : Jul 2, 2019, 2:22 PM IST

ಅಯುಕ್ತರಿಂದ ಖಡಕ್‌ ವಾರ್ನಿಂಗ್‌

ಮಂಗಳೂರು:ಕರಾವಳಿಯಲ್ಲಿ ಇತ್ತೀಚೆಗೆ ಅಶಾಂತಿಗೆ ಕಾರಣವಾಗಿರುವ ಜಾನುವಾರು ಕಳವು ಪ್ರಕರಣಗಳಿಗೆ ಕಡಿವಾಣ ಹಾಕಲು ಇಂದು ಬೆಳ್ಳಂಬೆಳಗ್ಗೆ ಜಾನುವಾರು ಕಳವು, ಸಾಗಣೆ, ವಧೆ ಮುಂತಾದ ಅಪರಾಧಗಳಲ್ಲಿ ಭಾಗಿಯಾಗಿದ್ದ ಆರೋಪಿಗಳಿಗೆ ನಗರ ಪೊಲೀಸ್ ಆಯುಕ್ತ ಡಾ.ಸಂದೀಪ್ ಪಾಟೀಲ್ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಒಟ್ಟು 102 ಜನ ಅಕ್ರಮ ಜಾನುವಾರು ಸಾಗಣೆದಾರರ ಪರೇಡ್ ನಡೆಸಿ ಖಡಕ್ ಎಚ್ಚರಿಕೆ ನೀಡಿದ ನಗರ ಪೊಲೀಸ್ ಆಯುಕ್ತರು, ಇನ್ನು ಮುಂದೆ ಅಕ್ರಮ ಜಾನುವಾರು ಸಾಗಣೆ, ಗೋ ಕಳವು, ಗೋ ವಧೆ ಮುಂತಾದ ಯಾವುದೇ ಅಪರಾಧಿ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ತಾಕೀತು ಮಾಡಿದರು. ಈ ಸಂದರ್ಭ ಸದ್ದಾಂ, ಹಕೀಂ, ಫೈಸಲ್, ದಾವುದ್ ಮುಂತಾದ ಜಾನುವಾರು ಕಳವಿನ ನಟೋರಿಯಸ್ ಅಪರಾಧಿಗಳಿಗೆ ಮತ್ತೆ ಬಾಲ ಬಿಚ್ಚದಂತೆ ವಿಚಾರಣೆ ನಡೆಸಿ ಬೆವರಿಳಿಸಿದರು.

ಅಕ್ರಮ ಜಾನುವಾರು ಸಾಗಣೆದಾರರ ಪರೇಡ್ ನಡೆಸಿದ ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್

ಜಾನುವಾರು ಕಳವು ಮತ್ತು ಅಕ್ರಮ ಸಾಗಣೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸ್ ಇಲಾಖೆ, ಇವುಗಳ ಮೇಲೆ ಕಟ್ಟುನಿಟ್ಟಿನ ಕಣ್ಗಾವಲು ಇರಿಸಲು ವಿಶೇಷ ತಂಡವನ್ನು ರಚನೆ ಮಾಡಿದೆ. ಜಾನುವಾರು ಕಳವಿಗೆ ಸಂಬಂಧಿಸಿದಂತೆ ಹಳೆಯ ಆರೋಪಿಗಳ ಬಗ್ಗೆ ನಿಗಾ ಇರಿಸಲಾಗುತ್ತಿದ್ದು, ಗೋ ಕಳ್ಳರನ್ನು ಮಟ್ಟಹಾಕಲು ನಗರ ಪೊಲೀಸ್ ಇಲಾಖೆ ಗಂಭೀರ ಪ್ರಯತ್ನ ನಡೆಸುತ್ತಿದೆ.

ABOUT THE AUTHOR

...view details