ಬಂಟ್ವಾಳ (ದ.ಕ.): ಕೊರೊನಾ ಸಂದರ್ಭ ಯಾರೂ ಮನೆಯಿಂದ ಹೊರಬಾರದು ಎಂಬ ಕಟ್ಟಪ್ಪಣೆ ಇದ್ದಾಗಲೂ ಕಳ್ಳರು ಕೈಚಳಕ ತೋರಿಸಿರುವ ಘಟನೆ ಬಂಟ್ವಾಳ ತಾಲೂಕಿನ ಮೇಲ್ಕಾರಿನ ಕಾಲೇಜೊಂದರಲ್ಲಿ ನಿನ್ನೆ ರಾತ್ರಿ ನಡೆದಿದೆ.
ಭಾರತ ಲಾಕ್ಡೌನ್ ಮಧ್ಯೆ ಕಾಲೇಜಿಗೆ ಕನ್ನ... ಗುರುತು ಸಿಗಬಾರದೆಂದು ಸಿಸಿ ಕ್ಯಾಮರಾವನ್ನೇ ಕದ್ದೊಯ್ದ ಕಳ್ಳರು
ಬಂಟ್ವಾಳ ನಗರ ಠಾಣೆಗೊಳಪಟ್ಟ ಮೇಲ್ಕಾರಿನ ಖಾಸಗಿ ಕಾಲೇಜೊಂದಕ್ಕೆ ನುಗ್ಗಿ ಕಳ್ಳರು ಸಿಸಿ ಕ್ಯಾಮರಾವನ್ನೇ ಕದ್ದೊಯ್ದಿದ್ದಾರೆ.
bantwal
ಸ್ಥಳೀಯರು ಬೆಳಗ್ಗೆ ಅನುಮಾನದಿಂದ ಕಾಲೇಜನ್ನು ನೋಡಿದಾಗ ವಿಷಯ ಬೆಳಕಿಗೆ ಬಂದಿದೆ. ಕಾಲೇಜು ಬಾಗಿಲು ಒಡೆದು ಕಪಾಟಿನ ಬಾಗಿಲು ತೆರೆದು ಚೆಲ್ಲಾಪಿಲ್ಲಿಗೊಳಿಸಿರುವ ಕಳ್ಳರು, ತಮ್ಮ ಗುರುತು ಗೊತ್ತಾಗಬಾರದೆಂದು ಸಿಸಿ ಕ್ಯಾಮರಾ ಮತ್ತು ಮಾನಿಟರ್ ಕದ್ದಿದ್ದಾರೆ.
ಕಳೆದ ಹತ್ತು ದಿನಗಳಲ್ಲಿ ಮೂರು ಶಾಲೆ ಹಾಗೂ ಒಂದು ಕಾಲೇಜಿನಲ್ಲಿ ಕಳವು ಪ್ರಕರಣ ಬಂಟ್ವಾಳ ಪೊಲೀಸ್ ವೃತ್ತ ವ್ಯಾಪ್ತಿಯಲ್ಲಿ ನಡೆದಿವೆ.