ಮಂಗಳೂರು : ಮಂಗಳೂರಿನ ಬಲ್ಲಾಳ್ ಭಾಗ್ ಬಳಿ ಇರುವ ಖಾಸಗಿ ಕಾಲೇಜಿನ ಬಳಿ ಎರಡು ತಂಡಗಳ ನಡುವೆ ಗಲಾಟೆ ನಡೆದಿದೆ. ಈ ವೇಳೆ ಒಂದು ತಂಡದಲ್ಲಿದ್ದ ವ್ಯಕ್ತಿ ಮಾರಾಕಾಸ್ತ್ರಗಳೊಂದಿಗೆ ಬಂದಿರುವ ವಿಡಿಯೋ ವೈರಲ್ ಆಗಿದೆ.
ಖಾಸಗಿ ಕಾಲೇಜಿನ ವಿದ್ಯಾರ್ಥಿಯೊಬ್ಬನ ದ್ವಿಚಕ್ರ ವಾಹನ ಕಾಲೇಜು ಇರುವ ಕಾಲೋನಿಯ ವ್ಯಕ್ತಿಗೆ ಸ್ಪರ್ಶಿಸಿದ್ದು, ಈ ವಿಚಾರದಲ್ಲಿ ಸ್ಥಳದಲ್ಲಿ ವಾಗ್ವಾದ ನಡೆದಿತ್ತು. ಇದೇ ವಿಚಾರದಲ್ಲಿ ಗಲಾಟೆ ನಡೆದು ಹೊಡೆದಾಟದ ಹಂತದವರೆಗೆ ತಲುಪಿತ್ತು. ಘಟನೆ ಬಳಿಕ ವಿದ್ಯಾರ್ಥಿಗಳು ತಮ್ಮ ಹಾಸ್ಟೆಲ್ಗೆ ಹೊರಟು ಹೋಗಿದ್ದರು.