ಮೈಸೂರು: ರೇಣುಕಾಚಾರ್ಯ ಸಚಿವ ಸ್ಥಾನಕ್ಕೆ ಅರ್ಹರಿದ್ದಾರೆ ಎಂದು ಹೇಳುವ ಮೂಲಕ ಸಚಿವ ಮುರುಗೇಶ ನಿರಾಣಿ ಶಾಸಕ ರೇಣುಕಾಚಾರ್ಯ ಪರ ಬ್ಯಾಟಿಂಗ್ ಮಾಡಿದ್ದಾರೆ.
ಸುತ್ತೂರು ಶ್ರೀಕ್ಷೇತ್ರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬರುವ ದಿನಗಳಲ್ಲಿ ರೇಣುಕಾಚಾರ್ಯ ಸೇರಿದಂತೆ ಉಳಿದವರಿಗೂ ಸಂಪುಟದಲ್ಲಿ ಅವಕಾಶ ಸಿಗುವ ಸಾಧ್ಯತೆಯಿದೆ. ಖಾತೆ ಹಂಚಿಕೆಯಲ್ಲಿ ವಿಭಾಗವಾರು ಏರುಪೇರಾಗಿದೆ. ಮುಂದೆ ಇದು ಸರಿಯಾಗುತ್ತದೆ ಎಂದು ಹೇಳಿದರು.
ರೇಣುಕಾಚಾರ್ಯ ಪರ ಬ್ಯಾಟಿಂಗ್ ಬೀಸಿದ ಮುರುಗೇಶ ನಿರಾಣಿ ನನಗೆ ಕೊಟ್ಟಿರುವ ಖಾತೆ ಬಗ್ಗೆ ಅಸಮಾಧಾನ ಇಲ್ಲ: ನಾನು ಬಯಸಿದ ಖಾತೆಯನ್ನೇ ಸಿಎಂ ಕೊಟ್ಟಿದ್ದಾರೆ. ಸ್ವತಃ ನಾನು ಕೈಗಾರಿಕೋದ್ಯಮಿ. ಕೈಗಾರಿಕೋದ್ಯಮದ ಸಮಸ್ಯೆ ಬಗೆಹರಿಸಲು ಕಾರ್ಯಕ್ರಮ ರೂಪಿಸುತ್ತೇನೆ ಎಂದು ಹೇಳಿದರು.
ಯೋಗೇಶ್ವರ ದೆಹಲಿಗೆ ಹೋಗಿರುವುದು ವಿಶೇಷ ಅಲ್ಲ: ಸಿ.ಪಿ ಯೋಗೇಶ್ವರ್ ದೆಹಲಿಗೆ ಹೋಗಿರುವ ವಿಚಾರ ಗೊತ್ತಿಲ್ಲ. ನಾನು ಸಹ ದೆಹಲಿಗೆ ಹೋಗಿದ್ದೇನೆ ಅಂತಾ ವದಂತಿ ಹಬ್ಬಿದೆ. ನಾನು ಇಲ್ಲೇ ಇದ್ದೇನೆ, ಯೋಗೇಶ್ವರ್ ಹೋಗಿದ್ದರೆ ಅವರ ವೈಯುಕ್ತಿಕ ವಿಚಾರ. ನಾನು ಸಹ ದೆಹಲಿಗೆ ಆಗಾಗ್ಗೆ ಹೋಗುತ್ತೇನೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯ ಇಲ್ಲ ಎಂದು ಹೇಳಿದರು.