ಕರ್ನಾಟಕ

karnataka

ETV Bharat / state

ಮೃತ ಮೀನುಗಾರರ ಕುಟುಂಬಕ್ಕೆ ನಾಳೆ ಸಂಜೆಯೊಳಗೆ ಪರಿಹಾರ: ಶ್ರೀನಿವಾಸ ಪೂಜಾರಿ - Srinivasa Poojary

ಮೃತಪಟ್ಟ ಮೀನುಗಾರರ ಕುಟುಂಬಗಳಿಗೆ ತಲಾ ಆರು ಲಕ್ಷ ರೂ. ಪರಿಹಾರವನ್ನು ನಾಳೆ ಸಂಜೆಯೊಳಗೆ ವಿತರಿಸಲಾಗುವುದು ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದ್ದಾರೆ.

Srinivasa Poojary
ಶ್ರೀನಿವಾಸ ಪೂಜಾರಿ

By

Published : Dec 2, 2020, 3:05 PM IST

Updated : Dec 2, 2020, 3:28 PM IST

ಮಂಗಳೂರು: ಮಂಗಳೂರಿನಲ್ಲಿ ನಡೆದ ಬೋಟ್ ದುರಂತದಲ್ಲಿ ಮೃತಪಟ್ಟ ಮೀನುಗಾರರ ಕುಟುಂಬಗಳಿಗೆ ತಲಾ ಆರು ಲಕ್ಷ ರೂ. ಪರಿಹಾರವನ್ನು ನಾಳೆ ಸಂಜೆಯೊಳಗೆ ವಿತರಿಸಲಾಗುವುದು ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಬೋಟ್ ದುರಂತದಲ್ಲಿ ಮೃತಪಟ್ಟ ನಾಲ್ಕು ಜನರ ಮೃತದೇಹವನ್ನು ಇರಿಸಲಾಗಿದ್ದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಭೇಟಿ ನೀಡಿ ಬಳಿಕ ಮಾತನಾಡಿದ ಅವರು, ಇದು ಅತ್ಯಂತ ನೋವಿನ ಸಂಗತಿ. ಈ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೆ. ಅವರು ತುರ್ತು ಕಾರ್ಯಾಚರಣೆ ನಡೆಸಲು ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ. ಈ ಘಟನೆ ನಡೆಯಲು ಕಾರಣ ಏನು ಎಂದು ಮೀನುಗಾರಿಕಾ ನಿರ್ದೇಶಕರಿಂದ ವರದಿಯನ್ನು ತರಿಸಲಾಗುವುದು ಎಂದರು.

ಮೃತ ಮೀನುಗಾರರ ಕುಟುಂಬಕ್ಕೆ ನಾಳೆ ಸಂಜೆಯೊಳಗೆ ಪರಿಹಾರ

ಓದಿ:ಮಂಗಳೂರು ಬೋಟ್ ದುರಂತ: ನಾಪತ್ತೆಯಾದ ನಾಲ್ವರ ಪತ್ತೆಗೆ ಮುಂದುವರಿದ ಶೋಧ

ಕೋಸ್ಟ್ ಗಾರ್ಡ್​ನವರು ಕಾರ್ಯಾಚರಣೆಯಲ್ಲಿ ನೇರವಾಗಿ ಪಾಲ್ಗೊಂಡಿಲ್ಲ ಎಂಬ ಆಪಾದನೆ ಬಗ್ಗೆ ಉತ್ತರಿಸಿದ ಅವರು, ಈ ಬಗ್ಗೆ ಚರ್ಚೆ ಮಾಡಲು ಹೋಗುವುದಿಲ್ಲ. ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು.

ಈ ಸಂದರ್ಭದಲ್ಲಿ ಕೋಸ್ಟ್ ಗಾರ್ಡ್ ಸಿಬ್ಬಂದಿ ನೇರವಾಗಿ ಕಾರ್ಯಾಚರಣೆ ಯಲ್ಲಿ ಪಾಲ್ಗೊಳ್ಳದಿರುವ ಬಗ್ಗೆ ಹಾಗೂ ಸರ್ಕಾರ ಮೃತ ಕುಟುಂಬಕ್ಕೆ ಸಾಂತ್ವನ ಹೇಳದಿರುವುದಕ್ಕೆ ಸಚಿವರನ್ನು ಸುತ್ತುವರಿದು ತಮ್ಮ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ಜರುಗಿತು.

Last Updated : Dec 2, 2020, 3:28 PM IST

ABOUT THE AUTHOR

...view details