ಕರ್ನಾಟಕ

karnataka

ETV Bharat / state

'ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಸವಲತ್ತು ಒದಗಿಸಲು 400 ಕೋಟಿ ಬಿಡುಗಡೆ'

ಗುಣಮಟ್ಟ ಕಾಯ್ದುಕೊಳ್ಳುವ ಸಲುವಾಗಿ ಸಲಕರಣೆಗಳನ್ನು ಉತ್ಪನ್ನ ಮಾರಾಟ ಕಂಪೆನಿಯ ಮೂಲಕ ರೈತರಿಗೆ ನೇರವಾಗಿ ತಲುಪಿಸಲು ಸರ್ಕಾರ ನಿರ್ಧರಿಸಿದ ಕಾರಣ ಕೆಲ ಸವಲತ್ತು ಸಿಗಲು ವಿಳಂಬವಾಗಿತ್ತು. ಈಗ ಆ ಎಲ್ಲ ಪ್ರಕ್ರಿಯೆ ಪೂರ್ಣಗೊಂಡು ಪೂರೈಕೆಗೆ ಸಚಿವ ಸಂಪುಟದ ಒಪ್ಪಿಗೆ ಪಡೆದು ಅನುದಾನ ಮಂಜೂರು ಮಾಡಲಾಗಿದೆ ಎಂದು ಸಚಿವ ಡಾ. ಕೆ.ಸಿ. ನಾರಾಯಣ ಗೌಡ ಹೇಳಿದರು.

release Rs 400 crore to farmers Minister Narayana Gowda
ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಸವಲತ್ತು ಒದಗಿಸಲು 400 ಕೋಟಿ ಬಿಡುಗಡೆ: ಸಚಿವ ನಾರಾಯಣ ಗೌಡ

By

Published : Aug 26, 2020, 5:45 PM IST

Updated : Aug 26, 2020, 6:02 PM IST

ಪುತ್ತೂರು:ತೋಟಗಾರಿಕೆ ಇಲಾಖೆಯ ಮೂಲಕ ರೈತರಿಗೆ ರಿಯಾಯಿತಿ ದರದಲ್ಲಿ ಸವಲತ್ತು ಒದಗಿಸುವ ನಿಟ್ಟಿನಲ್ಲಿ 400 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಪೌರಾಡಳಿತ, ರೇಷ್ಮೆ ಹಾಗೂ ತೋಟಗಾರಿಕೆ ಸಚಿವ ಡಾ. ಕೆ.ಸಿ. ನಾರಾಯಣ ಗೌಡ ಹೇಳಿದರು.

'ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಸವಲತ್ತು ಒದಗಿಸಲು 400 ಕೋಟಿ ಬಿಡುಗಡೆ'

ಪುತ್ತೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ತೋಟಗಾರಿಕೆ ಇಲಾಖೆಗಳಲ್ಲಿ ರೈತರಿಗೆ ದೊರೆಯುವ ಸವಲತ್ತು ವಿತರಣೆ ವಿಳಂಬದ ಕುರಿತಂತೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ಗುಣಮಟ್ಟ ಕಾಯ್ದುಕೊಳ್ಳುವ ಸಲುವಾಗಿ ಸಲಕರಣೆಗಳನ್ನು ಉತ್ಪನ್ನ ಮಾರಾಟ ಕಂಪೆನಿಯ ಮೂಲಕ ರೈತರಿಗೆ ನೇರವಾಗಿ ತಲುಪಿಸಲು ಸರ್ಕಾರ ನಿರ್ಧರಿಸಿದ ಕಾರಣ ಕೆಲ ಸವಲತ್ತು ಸಿಗಲು ವಿಳಂಬವಾಗಿತ್ತು. ಈಗ ಆ ಎಲ್ಲ ಪ್ರಕ್ರಿಯೆ ಪೂರ್ಣಗೊಂಡು ಪೂರೈಕೆಗೆ ಸಚಿವ ಸಂಪುಟದ ಒಪ್ಪಿಗೆ ಪಡೆದು ಅನುದಾನ ಮಂಜೂರು ಮಾಡಲಾಗಿದೆ ಎಂದರು.

ಸಿಬ್ಬಂದಿ ಶೀಘ್ರ ನೇಮಕ:

ಪುತ್ತೂರು ನಗರಸಭೆಯಲ್ಲಿ ಶೇ.60 ಕ್ಕಿಂತ ಅಧಿಕ ಹುದ್ದೆ ಖಾಲಿ ಇರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೆಲ ತಾಂತ್ರಿಕ ಕಾರಣಗಳಿಂದ ನೇಮಕಾತಿಗೆ ತೊಡಕು ಉಂಟಾಗಿತ್ತು. ಪ್ರಸ್ತುತ ಹುದ್ದೆ ಭರ್ತಿ ಬಗ್ಗೆ ಪ್ರಕ್ರಿಯೆ ಆರಂಭಿಸಿದ್ದು, ಪುತ್ತೂರು ಸೇರಿದಂತೆ ರಾಜ್ಯದ ಸ್ಥಳೀಯಾಡಳಿತಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದರು.

Last Updated : Aug 26, 2020, 6:02 PM IST

ABOUT THE AUTHOR

...view details