ಕರ್ನಾಟಕ

karnataka

ETV Bharat / state

ಮಂಗಳೂರಿನಲ್ಲಿ ಮುಂಗಾರು ಮಳೆಯ ಸಿಂಚನ

ಇಂದು ಕರ್ನಾಟಕಕ್ಕೆ ಮುಂಗಾರು ಪ್ರವೇಶಿಸಬಹುದೆಂದು ಅಂದಾಜಿಸಲಾಗಿದ್ದರೂ ಕೂಡ ನಿನ್ನೆ ಸಂಜೆ ವೇಳೆಗೆ ಕರ್ನಾಟಕ ಪ್ರವೇಶಿಸಿ ವಿವಿಧೆಡೆ ಮಳೆ ಆಗಿತ್ತು. ಮಧ್ಯರಾತ್ರಿಯಿಂದ ಮಂಗಳೂರಿನಲ್ಲಿ ‌ಮುಂಗಾರು ಮಳೆ ಆರಂಭವಾಗಿದ್ದು, ಹನಿಗಳ ಸಿಂಚನವಾಗುತ್ತಿದೆ.

rain in mangalore
ಮಂಗಳೂರಿನಲ್ಲಿ ಮುಂಗಾರು ಮಳೆಯ ಸಿಂಚನ

By

Published : Jun 5, 2021, 8:33 AM IST

ಮಂಗಳೂರು: ರಾಜ್ಯಕ್ಕೆ ನಿನ್ನೆ ಮುಂಗಾರು ಮಳೆ ಪ್ರವೇಶಿಸಿದ್ದು, ಇಂದು ಜಿಲ್ಲೆಯಲ್ಲಿ ಮಳೆಯಾಗುತ್ತಿದೆ.

ಕೇರಳಕ್ಕೆ ಜೂನ್ 3ಕ್ಕೆ ಮುಂಗಾರು ಪ್ರವೇಶಿಸಿತ್ತು. ಇಂದು (ಜೂನ್ 5) ಕರ್ನಾಟಕಕ್ಕೆ ಮುಂಗಾರು ಪ್ರವೇಶಿಸಬಹುದೆಂದು ಅಂದಾಜಿಸಲಾಗಿದ್ದರೂ ಕೂಡ ನಿನ್ನೆ (ಜೂನ್​​ 4) ಸಂಜೆ ವೇಳೆಗೆ ಕರ್ನಾಟಕ ಪ್ರವೇಶಿಸಿ ವಿವಿಧೆಡೆ ಮಳೆ ಆಗಿತ್ತು.

ಮುಂಗಾರು ಮಳೆ

ಮುಂಗಾರು ಕರ್ನಾಟಕ ಪ್ರವೇಶದ ವೇಳೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತದೆ. ಆದರೆ ನಿನ್ನೆ ಮಧ್ಯಾಹ್ನದ ಬಳಿಕ ಮಂಗಳೂರಿನಲ್ಲಿ ಮಳೆಯೇ ಬಂದಿರಲಿಲ್ಲ. ಮಧ್ಯರಾತ್ರಿಯಿಂದ ಮಂಗಳೂರಿನಲ್ಲಿ ‌ಮುಂಗಾರು ಮಳೆ ಆರಂಭವಾಗಿದ್ದು, ಹನಿಗಳ ಸಿಂಚನವಾಗುತ್ತಿದೆ. ಮುಂಗಾರು ಮಳೆಯ ಆಗಮನದಿಂದ ಜಿಲ್ಲೆಯಾದ್ಯಂತ ತಂಪಾದ ವಾತವರಣವಿದೆ.

ABOUT THE AUTHOR

...view details