ಕರ್ನಾಟಕ

karnataka

By

Published : Apr 19, 2020, 3:41 PM IST

ETV Bharat / state

ಬೀಡಿ ಕಾರ್ಮಿಕರಿಂದ ಶೇ. 50ರಷ್ಟು ಬೀಡಿ ಖರೀದಿ ಜೊತೆಗೆ ಬೋನಸ್​

ಬೀಡಿ ಕಾರ್ಮಿಕರು ತಯಾರಿಸಿದ ಬೀಡಿಗಳಲ್ಲಿ ಶೇ. 50ರಷ್ಟನ್ನು ತೆಗೆದುಕೊಳ್ಳುವುದರೊಂದಿಗೆ ಅವರಿಗೆ ಬೋನಸ್‌ಗಳನ್ನು ನೀಡಬೇಕು ಎಂದು ನಿರ್ಧರಿಸಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

Purchase of 50% of Beedi from beedi workers and bonus
ಬೀಡಿ ಕಾರ್ಮಿಕರಿಂದ ಶೇ. 50ರಷ್ಟು ಬೀಡಿ ಖರೀದಿ ಜೊತೆಗೆ ಬೋನಸ್​

ಪುತ್ತೂರು(ದಕ್ಷಿಣ ಕನ್ನಡ):ಲಾಕ್​ಡೌನ್​ ಹಿನ್ನೆಲೆ ಬೀಡಿ ಕಾರ್ಮಿಕರಿಗೆದುರಾಗಿರುವ ನಷ್ಟ ಭರಿಸಲು ಕ್ರಮ ಕೈಗೊಳ್ಳಲಾಗಿದೆ. ಬೀಡಿ ಕಾರ್ಮಿಕರು ತಯಾರಿಸಿದ ಬೀಡಿಗಳಲ್ಲಿ ಶೇ. 50ರಷ್ಟನ್ನು ತೆಗೆದುಕೊಳ್ಳುವುದರೊಂದಿಗೆ ಅವರಿಗೆ ಬೋನಸ್‌ಗಳನ್ನು ನೀಡಬೇಕು ಎಂದು ನಿರ್ಧರಿಸಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಬೀಡಿ ಕಾರ್ಮಿಕರಿಂದ ಶೇ. 50ರಷ್ಟು ಬೀಡಿ ಖರೀದಿ ಜೊತೆಗೆ ಬೋನಸ್​

ಭಾನುವಾರ ತಾಲೂಕಿನ ಎಪಿಎಂಸಿ ಸಭಾಂಗಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಬೀಡಿ ಕಾರ್ಮಿಕರ ವಿಚಾರವನ್ನು ಪ್ರಸ್ತಾಪಿಸಿದರು. ಈಗಾಗಲೇ ಬಿಪಿಎಲ್, ಎಪಿಎಲ್ ಕಾರ್ಡುದಾರರಿಗೆ ವಿತರಿಸುವ ರೇಷನ್‌ನಲ್ಲಿ ಹೆಚ್ಚಳ ಮಾಡಲಾಗಿದ್ದು, ಅಕ್ಕಿ ಜೊತೆಗೆ ಗೋಧಿ, ಬೇಳೆಗಳನ್ನು ಸರಿಯಾಗಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಅಷ್ಟೇಅಲ್ಲದೇ, ಎಪಿಎಲ್, ಬಿಪಿಎಲ್ ಇಲ್ಲದವರಿಗೂ ರೇಷನ್ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರದ ಕಾರ್ಯಕರ್ತರು, ನಿರ್ಗತಿಕರು, ಇನ್ನಿತರ ಕಾರ್ಮಿಕ ವರ್ಗದವರಿಗೆ ಅಗತ್ಯ ವಸ್ತುಗಳನ್ನು ತಲುಪಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರದ ಶಾಸಕರು ಸೇರಿದಂತೆ ಸಂಸದರು ಶ್ರಮಿಸುತ್ತಿದ್ದಾರೆ.

ABOUT THE AUTHOR

...view details