ಮಂಗಳೂರು: ಮಹಾನಗರ ಪಾಲಿಕೆ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಂಗ್ರಹವಾದ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸಲು ಪಾಲಿಕೆ ಚಿಂತನೆ ನಡೆಸುತ್ತಿದೆ.
ಮಂಗಳೂರಿನಲ್ಲಿ ತ್ಯಾಜ್ಯ ಸ್ಫೋಟ.. ವೇಸ್ಟ್‌ನಿಂದ ವಿದ್ಯುತ್ ಉತ್ಪಾದಿಸಲು ಪಾಲಿಕೆ ಚಿಂತನೆ
ನಗರದಲ್ಲಿ 300 ಟನ್ ಕಸ ಸಂಗ್ರಹವಾಗುತ್ತಿದ್ದು, ಇದರಿಂದ ವಿದ್ಯುತ್ ಉತ್ಪಾದಿಸುವ ಘಟಕ ರೂಪಿಸಲು ಚಿಂತನೆ ನಡೆಸುತ್ತಿದ್ದೇವೆ ಎಂದು ಮೇಯರ್ ದಿವಾಕರ್ ಪಾಂಡೇಶ್ವರ ಹೇಳಿದ್ದಾರೆ..
ಮಂಗಳೂರಿನಲ್ಲಿ ತ್ಯಾಜ್ಯ ಸ್ಫೋಟ
ಮಂಗಳೂರಿನಲ್ಲಿ ಆ್ಯಂಟನಿ ವೇಸ್ಟ್ ಮ್ಯಾನೇಜ್ಮೆಂಟ್ ಕಸ ಸಂಗ್ರಹಿಸಲು ಗುತ್ತಿಗೆ ಪಡೆದಿದೆ. ಪಚ್ಚನಾಡಿಯಲ್ಲಿ ಸಂಗ್ರಹಿಸುವ ಕಸವನ್ನು ಸಣ್ಣ ಪ್ರಮಾಣದಲ್ಲಿ ಬಯೋಗ್ಯಾಸ್ ಆಗಿ ಮರುಬಳಕೆ ಮಾಡಲಾಗುತ್ತಿದೆ. ಆದರೆ, ಈ ಮರು ಬಳಕೆ ಸಣ್ಣ ಪ್ರಮಾಣದಲ್ಲಿ ಮಾತ್ರ ಇದೆ.
ನಗರದಲ್ಲಿ ದಿನ 300 ಟನ್ ಕಸ ಸಂಗ್ರಹವಾಗುತ್ತಿದ್ದು, ಅದನ್ನು ಮರುಬಳಕೆ ಪ್ರಯತ್ನವಾಗಿ ಕಸದಿಂದ ವಿದ್ಯುತ್ ಉತ್ಪಾದಿಸುವ ಘಟಕ ರೂಪಿಸಲು ಚಿಂತನೆ ನಡೆಸುತ್ತಿದ್ದೇವೆ ಎಂದು ಮೇಯರ್ ದಿವಾಕರ್ ಪಾಂಡೇಶ್ವರ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.