ಮಂಗಳೂರು: ಮಾದಕ ದ್ರವ್ಯ ವಿರುದ್ದ ಮಂಗಳೂರು ನಗರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಐದು ದಿನದಲ್ಲಿ 72 ಪ್ರಕರಣಗಳು ದಾಖಲಾಗಿವೆ.
ಮಾದಕ ದ್ರವ್ಯ ಸಾಗಾಟದಲ್ಲಿ 10 ಪ್ರಕರಣ ಮತ್ತು ಮಾದಕ ದ್ರವ್ಯ ಸೇವನೆ ಆರೋಪದಲ್ಲಿ 62 ಪ್ರಕರಣ ದಾಖಲಾಗಿದೆ. ಹತ್ತು ಮಂದಿಯನ್ನು ಬಂಧಿಸಲಾಗಿದ್ದು, 3 ಕೆಜಿ 688 ಗ್ರಾಂ. ಗಾಂಜಾ. 2.15 ಗ್ರಾಂ. ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ಖಾಸಗಿ ವಿಡಿಯೋ ಇಟ್ಕೊಂಡು ಬ್ಲ್ಯಾಕ್‌ಮೇಲ್.. ಸೈಬರ್ ಠಾಣೆಗೆ ಸಂತ್ರಸ್ತೆಯಿಂದ ದೂರು
ಉಳ್ಳಾಲ ಠಾಣೆಯಲ್ಲಿ 9, ಪಣಂಬೂರು ಠಾಣೆಯಲ್ಲಿ 8, ಸುರತ್ಕಲ್ ಮತ್ತು ಕಂಕನಾಡಿ ಠಾಣೆಯಲ್ಲಿ ತಲಾ 7, ಮಂಗಳೂರು ಗ್ರಾಮಾಂತರ ಮತ್ತು ಮೂಡಬಿದಿರೆ ಠಾಣೆಯಲ್ಲಿ ತಲಾ 5 , ಮಂಗಳೂರು ದಕ್ಷಿಣ ಮತ್ತು ಮೂಲ್ಕಿ ಠಾಣೆಯಲ್ಲಿ ತಲಾ 4, ಎಕಾನಾಮಿಕ್ ಆ್ಯಂಡ್ ನಾರ್ಕೊಟಿಕ್ ಮತ್ತು ಉರ್ವ ಠಾಣೆಯಲ್ಲಿ ತಲಾ 3, ಬರ್ಕೆ ಠಾಣೆಯಲ್ಲಿ 2 , ಕೋಣಾಜೆ, ಬಜ್ಪೆ ಮತ್ತು ಕಾವೂರು ಠಾಣೆಯಲ್ಲಿ ತಲಾ1 ಪ್ರಕರಣ ದಾಖಲಾಗಿವೆ.