ಕರ್ನಾಟಕ

karnataka

ETV Bharat / state

ಇಲಿ ಜ್ವರಕ್ಕೆ ತುತ್ತಾಗಿ ಕಡಬದ ಯುವಕ ಬಲಿ - kadaba dakshina kannada latest news

ಇಲಿ ಜ್ವರಕ್ಕೆ ತುತ್ತಾಗಿ ಕಡಬ ಯುವಕ ಮೋಹಿತ್ ಬಲಿಯಾಗಿದ್ದಾರೆ. ಶೀತ ಹಾಗೂ ಜ್ವರದಿಂದ ಬಳಲುತ್ತಿದ್ದ ಮೋಹಿತ್ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.

mohit died by rat fever
ಇಲಿ ಜ್ವರಕ್ಕೆ ತುತ್ತಾಗಿ ಮೋಹಿತ್ ನಿಧನ

By

Published : Jul 8, 2021, 7:45 AM IST

ಕಡಬ: ಕಡಬ ತಾಲೂಕಿನ ಶೀರಾಡಿ ಆರೋಗ್ಯ ಕೇಂದ್ರ ವ್ಯಾಪ್ತಿಯ, ಐತ್ತೂರು ಗ್ರಾಮದ ಪಂಜೋಡಿ ನಿವಾಸಿ ಶಿವಪ್ಪ ಗೌಡರ ಪುತ್ರ ಮೋಹಿತ್ (19) ಇಲಿ ಜ್ವರಕ್ಕೆ ತುತ್ತಾಗಿ ಬುಧವಾರದಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಶೀತ ಹಾಗೂ ಜ್ವರದಿಂದ ಬಳಲುತ್ತಿದ್ದ ಮೋಹಿತ್ನನ್ನು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಜ್ವರ ಗುಣಮುಖವಾಗದ ಹಿನ್ನೆಲೆ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಮೋಹಿತ್ ನಿನ್ನೆ ನಿಧನರಾಗಿದ್ದಾರೆ.

ಮೃತ ಮೋಹಿತ್ ತಂದೆ, ತಾಯಿ, ಸಹೋದರಿ ಅವರನ್ನು ಅಗಲಿದ್ದಾರೆ. ಮಗನನ್ನು ಕಳೆದುಕೊಂಡ ಕುಟುಂಬದಲ್ಲಿ ದುಃಖ ಮಡುಗಟ್ಟಿದೆ.

ಇದನ್ನೂ ಓದಿ:ಬಿಡಾಡಿ ದನಗಳಿಗೆ ಆಸರೆಯಾದ ಆಧುನಿಕ 'ಬಾಪು': ಗೋಶಾಲೆ ತೆರೆದ ಮುದ್ದೇಬಿಹಾಳ ರೈತ

ABOUT THE AUTHOR

...view details