ಮಂಗಳೂರು:ನೀರಿಕ್ಷೆಯಂತೆ ಜೂನ್ ಮೊದಲ ವಾರದಲ್ಲಿಯೇ ಕೇರಳ ಪ್ರವೇಶಿಸಿರುವ ಮುಂಗಾರು ಮಳೆ, ಇಂದು ರಾಜ್ಯಕ್ಕೂ ಪ್ರವೇಶಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಹಲವೆಡೆ ಮಳೆ ಸುರಿದಿದೆ.
ಮಂಗಳೂರು ಪ್ರವೇಶಿಸಿದ ಮುಂಗಾರು ಮಳೆ ಪ್ರವೇಶ: ಅಲ್ಲಲ್ಲಿ ಮಳೆ - ನೀರಿನ ಅಭಾವ
ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣ ಸೃಷ್ಟಿಯಾಗಿದ್ದು, ಅಲ್ಲಲ್ಲಿ ಮಳೆಯಾಗುತ್ತಿದೆ. ಭಾರಿ ಮಳೆಯಾಗುವ ಸಾಧ್ಯತೆ ಕಂಡುಬರುತ್ತಿದೆ. ಹೀಗಾಗಿ ಜನರು ಎಚ್ಚರಿಕೆಯಿಂದ ಇರಬೇಕಾಗಿದೆ ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ.
ಮಂಗಳೂರಿನಲ್ಲಿ ಸುರಿದ ಮಳೆ
ಕರಾವಳಿ ಭಾಗದಲ್ಲಿ ಸೋಮವಾರ ನೈರುತ್ಯ ಮುಂಗಾರು ಮಳೆ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಕಳೆದ ವರ್ಷ ಮೊದಲ ವಾರದಲ್ಲಿಯೇ ರಾಜ್ಯಕ್ಕೆ ಮುಂಗಾರು ಮಳೆ ಕಾಲಿಟ್ಟಿತ್ತು. ಆದರೆ, ಈ ಬಾರಿ ತಡವಾಗಿ ಆಗಮಿಸಿದೆ. ಇಷ್ಟು ದಿನಗಳೂ ಬಿಸಿಲಿನ ಧಗೆಗೆ ಬೇಸತ್ತಿದ್ದ ಹಾಗೂ ನೀರಿನ ಅಭಾವದಿಂದ ಸಂಕಷ್ಟಕ್ಕೆ ದೂಡಿದ್ದ ಕರಾವಳಿ ಭಾಗದವರಿಗೆ ಮುಂಗಾರು ಮಳೆಯ ಆರಂಭ ಖುಷಿಕೊಟ್ಟಿದೆ.