ಮಂಗಳೂರು: ಮ.ನ.ಪಾ ಚುನಾವಣೆಗೆ ಪಾರದರ್ಶಕವಾಗಿ ಟಿಕೆಟ್ ನೀಡಲಾಗಿದೆ. ಗುಲ್ಜಾರ್ ಬಾನು ಮಗ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆಯೇ ಹೊರತು ಬೆಂಬಲಿಗರು ಈ ಕೃತ್ಯ ನಡೆಸಿಲ್ಲ. ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವುದು ಸತ್ಯಕ್ಕೆ ದೂರವಾದ ಮಾತು ಎಂದು ಮಾಜಿ ಶಾಸಕ ಮೊಯ್ದಿನ್ ಬಾವಾ ಹೇಳಿದರು.
ಮಂಗಳೂರು ಪಾಲಿಕೆ ಚುನಾವಣೆಗೆ ಪಾರದರ್ಶಕವಾಗಿ ಟಿಕೆಟ್ ನೀಡಲಾಗಿದೆ: ಮೊಯ್ದಿನ್ ಬಾವ
ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ನಡೆದ ಸಂದರ್ಭ, ಮಾಜಿ ಮೇಯರ್ ಗುಲ್ಜಾರ್ ಬಾನು ಪುತ್ರ ತನ್ನ ಮೇಲೆ ನಡೆಸಿದ ಹಲ್ಲೆ ಪ್ರಕರಣದ ಬಗ್ಗೆ ವಿಷಾದವಿದೆ ಎಂದು ಮಾಜಿ ಶಾಸಕ ಮೊಯ್ದಿನ್ ಬಾವಾ ಹೇಳಿದರು.
ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿ, ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಪಟ್ಟಿ ಬಿಡುಗಡೆ ನಡೆದ ಸಂದರ್ಭ, ಮಾಜಿ ಮೇಯರ್ ಗುಲ್ಜಾರ್ ಬಾನು ಪುತ್ರ ತನ್ನ ಮೇಲೆ ನಡೆಸಿದ ಹಲ್ಲೆ ಪ್ರಕರಣದ ಬಗ್ಗೆ ನನಗೆ ಬಹಳ ವಿಷಾದವಿದೆ ಎಂದರು.
ಈ ಗಲಭೆ ನಡೆದ ಸಂದರ್ಭದಲ್ಲಿ ಮಾಜಿ ಮೇಯರ್ ಗುಲ್ಜಾರ್ ಬಾನು, ಅವರ ಪುತ್ರ ಹಾಗೂ ಡ್ರೈವರ್ ಮೂರೇ ಮಂದಿ ಇದ್ದರು. ಆದರೆ ಕೆಲವು ಮಾಧ್ಯಮಗಳಲ್ಲಿ ಗುಲ್ಜಾರ್ ಬಾನು ಬೆಂಬಲಿಗರಿಂದ ಹಲ್ಲೆ ಎಂದು ಹೇಳಲಾಗಿದೆ. ಆದರೆ ಅಲ್ಲಿ ನಮ್ಮ ನಡುವೆ ಕೆಲವೇ ಹೊತ್ತು ಮಾತುಕತೆಯಾಗಿದ್ದು, ಏಕಾಏಕಿ ಗುಲ್ಜಾರ್ ಪುತ್ರ ನನ್ನ ಕೆನ್ನೆಗೆ ಬಾರಿಸಿದ್ದಾನೆ. ಆದರೆ ನಾನು ಆ ಸಂದರ್ಭ ಆತನ ವಿರುದ್ದ ಪೊಲೀಸ್ ದೂರು ನೀಡಿಲ್ಲ. ರಾತ್ರಿ ಕಿವಿಯೊಳಗೆ ಬಹಳಷ್ಟು ನೋವು ಕಾಣಿಸಿದ್ದು, ಈ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದೇನೆ. ಪೊಲೀಸರು ಮಾಧ್ಯಮದಲ್ಲಿ ಬಂದ ವರದಿಯನ್ನು ನೋಡಿ, ಆಸ್ಪತ್ರೆಗೆ ಬಂದು ನನ್ನಲ್ಲಿ ವಿವರ ಪಡೆದು ಸ್ವಯಂ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಹೇಳಿದರು.