ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆಯನ್ನು ಅದಾನಿ ಕಂಪನಿಗೆ ನೀಡಿದ ಬಳಿಕ, ತೆರವುಗೊಳಿಸಲಾಗಿದ್ದ ವಿಮಾನ ನಿಲ್ದಾಣದಲ್ಲಿದ್ದ ಹುಲಿವೇಷ ಕುಣಿತ ಕಲಾಕೃತಿಯನ್ನು ಮತ್ತೆ ಸ್ಥಾಪಿಸಲಾಗಿದೆ.
ಮಿಥುನ್ ರೈ ಎಚ್ಚರಿಕೆ, ಮಂಗಳೂರು ಏರ್ಪೋರ್ಟ್ ನಲ್ಲಿ ಮತ್ತೆ ಹುಲಿವೇಷ ಕುಣಿತ ಕಲಾಕೃತಿ ಸ್ಥಾಪನೆ
ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಹುಲಿವೇಷ ಕುಣಿತದ ಕಲಾಕೃತಿಯನ್ನು ಅದೇ ಜಾಗದಲ್ಲಿ 24 ಗಂಟೆಯೊಳಗೆ ಮರುಸ್ಥಾಪಿಸಬೇಕು ಎಂದು ಎಚ್ಚರಿಕೆ ನೀಡಿದ್ದರು. ಇದಾದ ಬೆನ್ನಿಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಈ ಹಿಂದೆ ಇದ್ದ ಹುಲಿವೇಷ ಕುಣಿತದ ಕಲಾಕೃತಿಯನ್ನು ಅದೇ ಜಾಗದಲ್ಲಿ ಆನೆಯ ಕಲಾಕೃತಿ ಸನಿಹದಲ್ಲಿ ಹಾಕಲಾಗಿದೆ.
ಮಂಗಳೂರು ಏರ್ ಪೋರ್ಟ್ ನಿರ್ವಹಣೆ ಗುತ್ತಿಗೆಯನ್ನು ಪಡೆದ ಅದಾನಿ ಸಂಸ್ಥೆ, ಏರ್ ಪೋರ್ಟ್ ಒಳಗಡೆ ಕರಾವಳಿ ಸಂಸ್ಕೃತಿಯನ್ನು ಬಿಂಬಿಸುವ ಹುಲಿವೇಷ ಕುಣಿತದ ಕಲಾಕೃತಿಯನ್ನು ತೆರವುಗೊಳಿಸಿತ್ತು. ಹುಲಿವೇಷ ಕುಣಿತ ಕಲಾಕೃತಿ ಇದ್ದ ಜಾಗದಲ್ಲಿ ಆನೆಯ ಕಲಾಕೃತಿ ಇಡಲಾಗಿತ್ತು.
ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಹುಲಿವೇಷ ಕುಣಿತದ ಕಲಾಕೃತಿಯನ್ನು ಅದೇ ಜಾಗದಲ್ಲಿ 24 ಗಂಟೆಯೊಳಗೆ ಮರುಸ್ಥಾಪಿಸಬೇಕು ಎಂದು ಎಚ್ಚರಿಕೆ ನೀಡಿದ್ದರು. ಇದಾದ ಬೆನ್ನಿಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಈ ಹಿಂದೆ ಇದ್ದ ಹುಲಿವೇಷ ಕುಣಿತದ ಕಲಾಕೃತಿಯನ್ನು ಅದೇ ಜಾಗದಲ್ಲಿ ಆನೆಯ ಕಲಾಕೃತಿ ಸನಿಹದಲ್ಲಿ ಹಾಕಲಾಗಿದೆ.