ಕರ್ನಾಟಕ

karnataka

ETV Bharat / state

ನಾಪತ್ತೆಯಾಗಿದ್ದ ವ್ಯಕ್ತಿಯ ಶವ ನೇತ್ರಾವತಿ ಕಿನಾರೆಯಲ್ಲಿ ಪತ್ತೆ - ಕೊಳೆತ ಸ್ಥಿತಿ

ಪರಿಶೀಲನೆ ವೇಳೆ ಮೃತ ದೇಹವನ್ನು ಕೊಕ್ಕಡ ಹಳ್ಳೆಂಗೇರಿ ನಿವಾಸಿ ಕಾಂತಪ್ಪ ಗೌಡರ ಪುತ್ರ ರಮೇಶ್(44) ಎಂದು ಗುರುತಿಸಲಾಗಿದೆ. ರಮೇಶ್ ಅವರು ನಾಪತ್ತೆಯಾದ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಶವ

By

Published : Apr 25, 2019, 1:54 AM IST

ಮಂಗಳೂರು: ನಾಪತ್ತೆಯಾಗಿದ್ದ ವ್ಯಕ್ತಿಯೋರ್ವರ ಶವ ಕೊಳೆತ ಸ್ಥಿತಿಯಲ್ಲಿ ಉಪ್ಪಿನಂಗಡಿ ನೇತ್ರಾವತಿ ಕಿನಾರೆಯಲ್ಲಿ ಪತ್ತೆಯಾಗಿದೆ.

ನೇತ್ರಾವತಿ ನದಿ ಕಿನಾರೆಯಲ್ಲಿ ಏ.24ರಂದು ಅಪರಿಚಿತ ಶವ ಪತ್ತೆಯಾಗಿದ್ದು, ಉಪ್ಪಿನಂಗಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಾಧವ ಎಂಬುವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.

ಪರಿಶೀಲನೆ ವೇಳೆ ಮೃತ ದೇಹವನ್ನು ಕೊಕ್ಕಡ ಹಳ್ಳೆಂಗೇರಿ ನಿವಾಸಿ ಕಾಂತಪ್ಪ ಗೌಡರ ಪುತ್ರ ರಮೇಶ್(44) ಎಂದು ಗುರುತಿಸಲಾಗಿದೆ. ರಮೇಶ್ ಅವರು ನಾಪತ್ತೆಯಾದ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ರಮೇಶ್ ಅವರದಿ ಸಹಜ ಸಾವೋ, ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ

ABOUT THE AUTHOR

...view details