ಕರ್ನಾಟಕ

karnataka

ETV Bharat / state

ಆರೋಗ್ಯ ಇಲಾಖೆಯೊಂದಿಗೆ ಚರ್ಚಿಸಿ ಶಾಲೆ ಆರಂಭದ ನಿರ್ಣಯ: ಸಚಿವ ಸುರೇಶ್ ಕುಮಾರ್​ - Suresh Kumar, Minister of Primary and High School Education

ಕೊರೊನಾ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಒಂದನೇ ತರಗತಿಯಿಂದ ಐದನೇ ತರಗತಿಗಳನ್ನು ಆರಂಭಿಸುವ ಬಗ್ಗೆ ಆರೋಗ್ಯ ಇಲಾಖೆಯ ತಾಂತ್ರಿಕ ಸಲಹಾ ತಜ್ಞರ ಅಭಿಪ್ರಾಯ ಪಡೆದುಕೊಂಡ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.

minister-suresh-kumar-talk
ಸಚಿವ ಸುರೇಶ್ ಕುಮಾರ್

By

Published : Mar 6, 2021, 3:52 PM IST

Updated : Mar 6, 2021, 4:26 PM IST

ಸುಬ್ರಹ್ಮಣ್ಯ:ಆರೋಗ್ಯ ಇಲಾಖೆಯ ತಾಂತ್ರಿಕ ತಜ್ಞರ ತಂಡದೊಂದಿಗೆ ಚರ್ಚಿಸಿ 1ನೇ ತರಗತಿಯಿಂದ 5ನೇ ತರಗತಿ ಆರಂಭದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಸುರೇಶ್ ಕುಮಾರ್​ ಹೇಳಿದರು.

ಸಚಿವ ಸುರೇಶ್ ಕುಮಾರ್​

ಓದಿ: ಸಿಡಿ ಪ್ರಕರಣದ ಹಿಂದೆ ಕನಕಪುರ, ಬೆಳಗಾವಿ ಕಡೆಯವರಿದ್ದಾರೆ: ಸಿ.ಪಿ.ಯೋಗೇಶ್ವರ್​​

ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಪಡೆದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೊರೊನಾ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಒಂದನೇ ತರಗತಿಯಿಂದ ಐದನೇ ತರಗತಿಗಳನ್ನು ಆರಂಭಿಸುವ ಬಗ್ಗೆ ಆರೋಗ್ಯ ಇಲಾಖೆಯ ತಾಂತ್ರಿಕ ಸಲಹಾ ತಜ್ಞರ ಅಭಿಪ್ರಾಯವನ್ನು ಪಡೆದುಕೊಂಡ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಏನು ಮಾತನಾಡಬೇಕು ಎಂಬುದು ಅರಿವಿಲ್ಲದೇ ಮಾತನಾಡುವ ಒಬ್ಬ ರಾಜಕಾರಣಿ ಇದ್ದರೆ ಅದು ದೇಶದಲ್ಲಿ ರಾಹುಲ್ ಗಾಂಧಿ ಮಾತ್ರ. ಅವರು ಮಾತನಾಡುವುದಕ್ಕೆ ಪ್ರತ್ಯುತ್ತರ ನೀಡುವುದು ಸಮಂಜಸವಲ್ಲ ಮತ್ತು ಆರ್​​​ಎಸ್​​​ಎಸ್ ಬಗ್ಗೆ ಮಾತನಾಡುವ ಮೊದಲು ಅವರು ಅದು ಏನೆಂದು ತಿಳಿದುಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.

Last Updated : Mar 6, 2021, 4:26 PM IST

ABOUT THE AUTHOR

...view details