ಕರ್ನಾಟಕ

karnataka

ETV Bharat / state

ಪಚ್ಚನಾಡಿ ತ್ಯಾಜ್ಯ ದುರಂತದ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಲು ಪ್ರಯತ್ನ: ಸಚಿವ ಭೈರತಿ ಬಸವರಾಜ್​

ಪಚ್ಚನಾಡಿ ಪ್ರದೇಶದಲ್ಲಿ ದೊಡ್ಡ ಮಟ್ಟದ ದುರಂತ ಸಂಭವಿಸಿದ್ದು, ಸಚಿವ ಭೈರತಿ ಬಸವರಾಜ್ ನಗರದ ಪಚ್ಚನಾಡಿ ತ್ಯಾಜ್ಯ ದುರಂತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Minister Byrathi Basavaraj
ಸಚಿವ ಭೈರತಿ ಬಸವರಾಜ್

By

Published : Feb 29, 2020, 4:35 PM IST

ಮಂಗಳೂರು:ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ನಗರದ ಪಚ್ಚನಾಡಿ ತ್ಯಾಜ್ಯ ದುರಂತ ಪ್ರದೇಶಕ್ಕೆ ಭೇಟಿ ನೀಡಿ, ಸ್ಥಳೀಯರ ಅಹವಾಲು ಆಲಿಸಿದರು.

ಪಚ್ಚನಾಡಿ ತ್ಯಾಜ್ಯ ದುರಂತದ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಲು ಪ್ರಯತ್ನ: ಸಚಿವ ಭೈರತಿ ಬಸವರಾಜ್

ಬಳಿಕ ಮಾತನಾಡಿದ ಅವರು, ಪಚ್ಚನಾಡಿ ಪ್ರದೇಶದಲ್ಲಿ ದೊಡ್ಡ ಮಟ್ಟದ ದುರಂತ ಸಂಭವಿಸಿದ್ದು, ಇದರ ಬಗ್ಗೆ ಇಲ್ಲಿ ಮನೆಗಳನ್ನು ಕಳೆದುಕೊಂಡವರಲ್ಲಿ ಮಾತನಾಡಿದ್ದೇನೆ. ಇಲ್ಲಿನ ಸಮಸ್ಯೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ, ತಕ್ಷಣ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಕರೆದಿದ್ದೇನೆ. ಬಳಿಕ‌ ಅಲ್ಲಿ ಚರ್ಚೆ ಮಾಡಿ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ಈ ತ್ಯಾಜ್ಯ ವಿಲೇವಾರಿ ಘಟಕಕ್ಕೆ ತಡೆಗೋಡೆ ನಿರ್ಮಾಣ ಮಾಡಲು ನಾಲ್ಕು ಕೋಟಿ ರೂ. ಮೀಸಲಿರಿಸಿ ಮುಂದಿನ ವಾರವೇ ಚಾಲನೆ ನೀಡಬೇಕೆಂದು ಆದೇಶಿಸಿದ್ದೇನೆ. ಮಳೆಯ ಸಂದರ್ಭ ತ್ಯಾಜ್ಯ ಘಟಕದ ಮೂಲಕ ಹರಿಯುವ ನೀರನ್ನು ಬೇರೆ ಕಡೆಗೆ ಹೋಗಲು ಅನುವು ಮಾಡಿಕೊಡುವಂತೆ ಸೂಚನೆ ನೀಡಿದ್ದೇನೆ. ರಸ್ತೆಯ ಮೇಲೆ ಬಿದ್ದಿರುವ ತ್ಯಾಜ್ಯ ರಾಶಿಯನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡುವಂತೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಈ ಸಂದರ್ಭ ಮಂಗಳೂರು ಮನಪಾ ಆಯುಕ್ತರಲ್ಲಿ ಮಾತನಾಡಿದ ಸಚಿವರು, ಪರಿಸರದ ಸ್ಥಳೀಯರ ಸಮಸ್ಯೆಗಳಿಗೆ ಸ್ಪಂದನೆ ನೀಡಿ. ಮುಂದಿನ ವಾರವೇ ತಡೆಗೋಡೆ ನಿರ್ಮಾಣ ಮಾಡಲು ಪೂಜೆ ಮಾಡಲು ವ್ಯವಸ್ಥೆ ಮಾಡಿ. ಅದರ ಫೋಟೋಗಳನ್ನು ನನಗೆ ವ್ಯಾಟ್ಸಪ್ ಮಾಡಬೇಕು ಎಂದು ಸೂಚನೆ ನೀಡಿದರು‌. ಅಲ್ಲದೆ ಪರಿಹಾರ ನೀಡುವಲ್ಲಿ ತಾರತಮ್ಯ ಆಗಿದೆ. ಅದರ ಪೂರ್ತಿ ಮಾಹಿತಿ ನೀಡಬೇಕು. ಮಂದಾರದ ಪಾರಂಪರಿಕ ಮನೆಯನ್ನು ಮತ್ತೆ ನಮಗೆ ನಿರ್ಮಾಣ ಮಾಡಲು ಸಾಧ್ಯವಾ ಅಥವಾ ಅವರೇ ಮತ್ತೆ ನಿರ್ಮಾಣ ಮಾಡುತ್ತಾರಾದರೆ ಅವರಿಗೆ ಅದರ ಪರಿಹಾರ ನೀಡುವ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿದರು.

ಜೊತೆಗೆ ಮನಪಾ ಎಂಜಿನಿಯರ್​ಗಳ ಜೊತೆಯಲ್ಲಿ ಮಾತನಾಡಿ, ಪರಿಸರದ ಜನರಿಗೆ ಶೀಘ್ರ ರಸ್ತೆಗಳ ವ್ಯವಸ್ಥೆ ಮಾಡಲು ಸೂಚನೆ ನೀಡಿದರು. ಈ ಬಗ್ಗೆ ತನಗೆ ಇದರ ಫೋಟೋಗಳನ್ನು ಕಳಿಸಬೇಕು ಎಂದು ಹೇಳಿದರು.

ABOUT THE AUTHOR

...view details