ಮಂಗಳೂರು:ನಿತ್ಯವೂ ಉತ್ಪನ್ನ ಬರುವುದು ಹಾಲಿನಿಂದ ಮಾತ್ರ. ಬೇರೆ ಯಾವ ವಸ್ತುವಿನಿಂದ ನಿತ್ಯ ಉತ್ಪನ್ನ ಬರಲು ಸಾಧ್ಯವಿಲ್ಲ. ಆದ್ದರಿಂದ ಹಾಲಿಗೆ ವಿಶೇಷ ಮಹತ್ವವನ್ನು ನೀಡಬೇಕೆಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ.. ಅಖಿಲ ಭಾರತ ಸಹಕಾರಿ ಸಪ್ತಾಹದ ಅಂಗವಾಗಿ ಶಕ್ತಿನಗರದ ಕೋರ್ಡೆಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗ್ರಾಮೀಣ ಮಟ್ಟದ ಜನತೆ ನೆಮ್ಮದಿಯಿಂದ ಬದುಕಲು ಹಾಗೂ ದಿನನಿತ್ಯವೂ ಕೈಗೆ ಹಣ ಬರಬೇಕಾದರೆ ಅದಕ್ಕೆ ಹಾಲು ಕಾರಣ ಎಂದರು.
ಹಾಲು ಉತ್ಪಾದನೆಗೆ ಸುಮಾರು 3,870 ಸಂಘಗಳಿಗೆ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯಿಂದ17.50 ಕೋಟಿ ರೂ. ಸಹಾಯ ಮಾಡಿದ್ದೇವೆ. ಹಾಲು ಉತ್ಪಾದಕರ ಸಂಘ ಸರಿಯಾಗಿ ಚಟುವಟಿಕೆಯಿಂದ ಇದ್ರೆ ಹಾಲು ಉತ್ಪಾದಕರಿಗೆ ದಿನನಿತ್ಯವೂ ಶಿಸ್ತು ಬದ್ಧವಾಗಿ ಹಣ ಬರುತ್ತದೆ ಎಂದು ತಿಳಿಸಿದರು.
ಇಂದು ಹಾಲು ಉತ್ಪಾದಕರ ಸಂಘಕ್ಕೆ ಸರ್ಕಾರ 4-5 ರೂ. ಸಬ್ಸಿಡಿ ನೀಡುವುದರಿಂದ ಬಹಳಷ್ಟು ಕುಟುಂಬಗಳಿಗೆ ಜೀವನಾಧಾರಕ್ಕೆ ಸಹಕಾರವಾಗುತ್ತಿದೆ ಎಂದು ವೀರೇಂದ್ರ ಹೆಗ್ಗಡೆ ಹೇಳಿದರು.