ಸುಳ್ಯ:ಸುಮಾರು 19 ವರ್ಷಗಳಿಂದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ.
2003ರಲ್ಲಿ ನಡೆದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕೇರಳ ವಯನಾಡ್ ಜಿಲ್ಲೆಯ ವೈತಿರಿ ತಾಲೂಕಿನ ಕಲ್ಲವಳಿಪ್ಪಲ್ ನಿವಾಸಿ ಕೆ.ಎಂ.ಸಿದ್ದಿಕ್ ಎಂಬಾತನ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ CC/1338/2003ರಂತೆ 457,380 ಸೆಕ್ಷನ್ ಅಡಿ ಪ್ರಕರಣ ದಾಖಲಾಗಿತ್ತು. ವಾರಂಟುದಾರನಾಗಿರುವ ಮತ್ತು A1 ಆರೋಪಿಯಾಗಿರುವ ಸಿದ್ದಿಕ್ ಪೊಲೀಸರ ಕಣ್ಣು ತಪ್ಪಿಸಿ 19 ವರ್ಷಗಳಿಂದ ಪರಾರಿಯಾಗಿದ್ದ.