ಮಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಎನ್ಸಿಬಿ ವಶದಲ್ಲಿದ್ದ ಆರೋಪಿಗಳಾದ ಕಿಶೋರ್ ಅಮನ್ ಶೆಟ್ಟಿ ಹಾಗೂ ಅಕೀಲ್ ನೌಶೀಲ್ರನ್ನು ಕೋರ್ಟ್ಗೆ ಹಾಜರು ಪಡಿಸಲು ಕರೆದೊಯ್ಯಲಾಗಿದೆ.
ಡ್ರಗ್ಸ್ ಪ್ರಕರಣ: ಎನ್ಸಿಬಿ ವಶದಲ್ಲಿದ್ದ ಆರೋಪಿಗಳು ನ್ಯಾಯಾಲಯಕ್ಕೆ ಹಾಜರು - ಕಿರುತೆರೆ ನಿರೂಪಕಿ ಅನುಶ್ರೀ
ಕಿರುತೆರೆ ನಿರೂಪಕಿ ಅನುಶ್ರೀಗೆ ಸಿಸಿಬಿ ಪೊಲೀಸರು ವಿಚಾರಣೆಗೆ ಹಾಜರಾಗಬೇಕೆಂದು ನಿನ್ನೆ ನೋಟಿಸ್ ನೀಡಿದ್ದರು. ಆದರೆ ಇಂದು ಅವರು ವಿಚಾರಣೆಗೆ ಹಾಜರಾಗದ ಹಿನ್ನೆಲೆ ಆರೋಪಿಗಳನ್ನು ಕೋರ್ಟ್ಗೆ ಹಾಜರು ಪಡಿಸಲು ಕರೆದೊಯ್ಯಲಾಯಿತು.
ನಗರದ ಪಾಂಡೇಶ್ವರದಲ್ಲಿರುವ ಇಕೊನಾಮಿಕ್ ಆ್ಯಂಡ್ ಎನ್ಸಿಬಿ ಪೊಲೀಸರು ಆರೋಪಿಗಳನ್ನು ಕರೆದೊಯ್ದಿದ್ದಾರೆ. ಇವರ ಜೊತೆಯಲ್ಲಿ ಹೆಸರು ಕೇಳಿಬರುತ್ತಿರುವ ಕಿರುತೆರೆ ನಿರೂಪಕಿ ಅನುಶ್ರೀಗೆ ಸಿಸಿಬಿ ಪೊಲೀಸರು ವಿಚಾರಣೆಗೆ ಹಾಜರಾಗಬೇಕೆಂದು ನಿನ್ನೆ ನೋಟಿಸ್ ನೀಡಿದ್ದರು. ಆದರೆ ಇಂದು ಅವರು ವಿಚಾರಣೆಗೆ ಹಾಜರಾಗದ ಹಿನ್ನೆಲೆ ಆರೋಪಿಗಳನ್ನು ಕೋರ್ಟ್ಗೆ ಹಾಜರು ಪಡಿಸಲು ಕರೆದೊಯ್ಯಲಾಯಿತು.
ಮೊದಲು ವೆನ್ಲಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಮಾಡಲಾಗುತ್ತದೆ. ಬಳಿಕ ಮಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಗುತ್ತದೆ. ತನಿಖೆಗಾಗಿ ಏಳು ದಿನಗಳ ಕಾಲ ಆರೋಪಿಗಳಾದ ಕಿಶೋರ್ ಅಮನ್ ಶೆಟ್ಟಿ ಹಾಗೂ ಅಕೀಲ್ ನೌಶೀಲ್ರನ್ನು ಎನ್ಸಿಬಿ ಪೊಲೀಸರ ವಶಕ್ಕೆ ನೀಡಲಾಗಿತ್ತು. ಇದೀಗ ವಿಚಾರಣೆ ಮುಗಿದ ಹಿನ್ನೆಲೆ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತಿದೆ.