ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ 33 ನೇ ಮೇಯರ್, ಉಪಮೇಯರ್ ಚುನಾವಣೆ ಮಾರ್ಚ್ 2 ರಂದು ನಡೆಯಲಿದೆ. ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಆಗಿರುವ ದಿವಾಕರ್ ಪಾಂಡೇಶ್ವರ ಅವರ ಅಧಿಕಾರವಧಿ ಫೆ.28 ರಂದು ಕೊನೆಗೊಳ್ಳಲಿದೆ. ಈ ಹಿನ್ನೆಲೆ ನೂತನ ಮೇಯರ್, ಉಪಮೇಯರ್ ಆಯ್ಕೆಗೆ ಚುನಾವಣೆ ಮಾರ್ಚ್ 2 ರಂದು ನಡೆಸಲು ನಿರ್ಧರಿಸಲಾಗಿದೆ.
33ನೇ ಅವಧಿಯ ಮೇಯರ್, ಉಪಮೇಯರ್ ಸ್ಥಾನಕ್ಕೆ ಮೀಸಲಾತಿ ಪ್ರಕಟಗೊಂಡಿದೆ. ಮೇಯರ್ ಸ್ಥಾನಕ್ಕೆ ಸಾಮಾನ್ಯ ಮತ್ತು ಉಪಮೇಯರ್ ಸ್ಥಾನಕ್ಕೆ ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಪಡಿಸಲಾಗಿದೆ. ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ 2019 ನ.12 ರಂದು ನಡೆದಿದ್ದು, ಪಾಲಿಕೆಯ 60 ಸ್ಥಾನಗಳ ಪೈಕಿ ಬಿಜೆಪಿ 44, ಕಾಂಗ್ರೆಸ್ 14 ಮತ್ತು ಎಸ್ಡಿಪಿಐ 2 ಸ್ಥಾನ ಪಡೆದಿತ್ತು. ಚುನಾವಣೆ ನಡೆದ ಬಳಿಕ ಮಂಗಳೂರು ಮಹಾನಗರ ಪಾಲಿಕೆಯ 32 ನೇ ಮೇಯರ್ ಆಗಿ ದಿವಾಕರ್ ಪಾಂಡೇಶ್ವರ, ಉಪಮೇಯರ್ ಆಗಿ ವೇದಾವತಿ ಆಯ್ಕೆಯಾಗಿದ್ದರು.
ಅನಿರ್ದಿಷ್ಟಾವಧಿ ಕಾಮಗಾರಿ ಸ್ಥಗಿತ
ದ.ಕ.ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯಲ್ಲಿನ ತೈಲಬೆಲೆ, ಬಿಡಿಭಾಗಗಳ ಬೆಲೆಯೇರಿಕೆ ಹಾಗೂ ಕಾರ್ಮಿಕರ ಕೊರತೆಯಿಂದ ಅನಿರ್ದಿಷ್ಟಾವಧಿ ಕಾಮಗಾರಿ ಸ್ಥಗಿತಗೊಳಿಸಿದೆ.
ಅನಿರ್ದಿಷ್ಟಾವಧಿ ಕಾಮಗಾರಿ ಸ್ಥಗಿತ ಬೆಲೆಯೇರಿಕೆಯ ಹೊಡೆತದಿಂದ ಮಾಲೀಕರು ಕೊಳವೆ ಬಾವಿಗಳ ಲಾರಿಗಳನ್ನು ನಿರ್ವಹಣೆ ಮಾಡದೇ ಸಂಕಷ್ಟಕ್ಕೊಳಗಾಗಿದ್ದಾರೆ. ಜೊತೆಗೆ ಉತ್ತರ ಭಾರತದ ಕಾರ್ಮಿಕರನ್ನು ಕರೆತರಲಾಗದ ಸ್ಥಿತಿಗೆ ಬಂದು ತಲುಪಿದ್ದಾರೆ. ಸರಕಾರಿ ಯೋಜನೆ ಸೇರಿದಂತೆ ಹಲವಾರು ಕಡೆಗಳಲ್ಲಿ ಕೊಳವೆ ಬಾವಿ ಕೊರೆಯಲು ಬೇಡಿಕೆ ಇದ್ದರೂ ದರ ಪರಿಷ್ಕರಣೆಯಾಗದೇ ನಷ್ಟವಾಗುತ್ತಿದೆ ಎಂದು ಮಾಲೀಕರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಪಿ. ನಾರಾಯಣ ಮಣಿಯಾಣಿ ನಿಧನ
ಪಿ. ನಾರಾಯಣ ಮಣಿಯಾಣಿ ನಿಧನ... ಪುತ್ತೂರಿನ ಬೊಳುವಾರು ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದ ಧರ್ಮದರ್ಶಿ ಪಿ. ನಾರಾಯಣ ಮಣಿಯಾಣಿ (84ವ) ಫೆ. 12ರಂದು ನಿಧನರಾಗಿದ್ದಾರೆ. ಸಂಘ ಪರಿವಾರದಲ್ಲಿ ಸಕ್ರಿಯರಾಗಿದ್ದ ನಾರಾಯಣ ಮಣಿಯಾಣಿ ಅವರು ಬಿಜೆಪಿಯ ಹಿರಿಯ ಕಾರ್ಯಕರ್ತರಾಗಿದ್ದರು. ಮೃತರು ಪತ್ನಿ ಭಾಗೀರಥಿ, ಪುತ್ರರಾದ ಪುತ್ತೂರು ಪತ್ರಕರ್ತರ ಸಂಘದ ಸದಸ್ಯ ಹಾಗೂ ಮ್ಯಾನೇಜರ್, ವರದಿಗಾರ ಪ್ರವೀಣ್ ಕುಮಾರ್ ಬೊಳುವಾರು, ನೀಲಂತ್ ಬೊಳುವಾರು, ಪುತ್ರಿ ಬೆಂಗಳೂರಿನಲ್ಲಿರುವ ಡಾ. ವಾಣಿ, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳನ್ನು ಮತ್ತು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.