ಕರ್ನಾಟಕ

karnataka

ETV Bharat / state

ಸಾಮಾಜಿಕ ಜಾಲತಾಣದ ಮೇಲೆ ಹದ್ದಿನ ಕಣ್ಣಿಟ್ಟ ಪೊಲೀಸರಿಗೆ ನಗದು ಬಹುಮಾನ ಹಸ್ತಾಂತರ - ಸಾಮಾಜಿಕ ಜಾಲತಾಣದ ಮೇಲೆ ಹದ್ದಿನ ಕಣ್ಣು

ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯ ಸಾಮಾಜಿಕ ಮಾಧ್ಯಮ ಮೇಲ್ವಿಚಾರಣಾ ಕೋಶದ ಆರು ಮಂದಿ ಪೊಲೀಸರಿಗೆ ನಗರ ಪೊಲೀಸ್​ ಆಯುಕ್ತ ಶಶಿಕುಮಾರ್ 10 ಸಾವಿರ ರೂ. ನಗದು ಬಹುಮಾನವನ್ನು ಹಸ್ತಾಂತರಿಸಿದರು.

ನಗದು ಬಹುಮಾನ ಹಸ್ತಾಂತರ
ನಗದು ಬಹುಮಾನ ಹಸ್ತಾಂತರ

By

Published : Mar 18, 2022, 7:08 AM IST

ಮಂಗಳೂರು: ಫೇಸ್​ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದ ಮೇಲೆ ಕಣ್ಗಾವಲು ಇರಿಸಿ ಕಾನೂನು ಸುವ್ಯವಸ್ಥೆ ಹದಗೆಡದಂತೆ ತಡೆದ ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯ ಸಾಮಾಜಿಕ ಮೇಲ್ವಿಚಾರಣಾ ಕೋಶದ ಪೊಲೀಸರಿಗೆ 10 ಸಾವಿರ ರೂ. ನಗದು ಬಹುಮಾನವನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಹಸ್ತಾಂತರಿಸಿದರು.

ಸಾಮಾಜಿಕ ಮೇಲ್ವಿಚಾರಣಾ ಕೋಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆರು ಮಂದಿ ಪೊಲೀಸರಾದ ರಾಜಾ ಎಂ, ಆಕಾಶ್ ನಾಯ್ಕ್, ಸಿದ್ದಪ್ಪ ಕಲ್ಮಡ, ವರ್ಗಿಸ್ ಸ್ಕರಿಯ, ಶರಣ ಬಸವ, ಸುರೇಶ್ ಎಂಬವರಿಗೆ ನಗದು ಬಹುಮಾನ ನೀಡಿದರು.

ಮಂಗಳೂರು ನಗರ ಪೊಲೀಸ್ ಕಮಿಷನರೇಟ್​ನಲ್ಲಿ ಸಾಮಾಜಿಕ ಮೇಲ್ವಿಚಾರಣಾ ಕೋಶವು ಕಳೆದ ಎರಡು ತಿಂಗಳಿನಿಂದ ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿನ ಪೊಲೀಸರ ತಂಡ ಕೋಮು ಸಾಮರಸ್ಯಕ್ಕೆ ಸಂಬಂಧಿಸಿದಂತೆ ನಗರ, ರಾಜ್ಯ ಹಾಗೂ ದೇಶದ ಎಲ್ಲ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ವಹಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಈ ತಂಡ ಕಳೆದ ಎರಡು ತಿಂಗಳಿಂದ ಹಲವಾರು ಅಪರಾಧ ಪ್ರಕರಣ ಮತ್ತು ಸಾಮಾಜಿಕ ಸಾಮರಸ್ಯ ಕದಡುವ ಘಟನೆಗಳನ್ನು ತಡೆದಿದೆ. ಈ ಕಾರ್ಯನಿರ್ವಹಣೆಯನ್ನು ಗುರುತಿಸಿ ಹಾಗೂ ಮುಂದಿನ ದಿನಗಳಲ್ಲಿ ಇನ್ನೂ ಅತ್ಯಂತ ಕಾರ್ಯನೈಪುಣ್ಯತೆಯೊಂದಿಗೆ ಕರ್ತವ್ಯ ನಿರ್ವಹಿಸುವಂತೆ ಪ್ರೋತ್ಸಾಹಿಸುವ ಸಲುವಾಗಿ ಪೊಲೀಸ್​ ಆಯುಕ್ತ ಶಶಿಕುಮಾರ್ ಬಹುಮಾನ ನೀಡಿದ್ದಾರೆ.

ಇದನ್ನೂ ಓದಿ:ಉಕ್ರೇನ್​​ ಶಾಲೆ ಮೇಲೆ ರಷ್ಯಾ ಬಾಂಬ್ ದಾಳಿ: 21 ಸಾವು, 25ಕ್ಕೂ ಅಧಿಕ ಮಂದಿ ಗಾಯ

ABOUT THE AUTHOR

...view details