ಮಂಗಳೂರು: ರಾಜ್ಯ ಸರ್ಕಾರ ಇಂದು ರಾತ್ರಿಯಿಂದ 14 ದಿನಗಳ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸಿದ್ದು, ಜನರು ಅಗತ್ಯ ಸಾಮಾಗ್ರಿಗಳ ಖರೀದಿಗೆ ಮುಗಿದಿದ್ದಾರೆ. ಮಂಗಳೂರಿನ ಸೆಂಟ್ರಲ್ ಮಾರುಕಟ್ಟೆ, ಸ್ಟೇಟ್ ಬ್ಯಾಂಕ್ ಬಳಿಯ ಮೀನು ಮಾರುಕಟ್ಟೆ, ತರಕಾರಿ ಮಾರುಕಟ್ಟೆ ಜನಜಂಗುಳಿ ತುಂಬಿದೆ.
ಲಾಕ್ ಡೌನ್ ಭೀತಿ: ಮಾರುಕಟ್ಟೆಯಲ್ಲಿ ಖರೀದಿ ಮಾಡಲು ಮುಗಿಬಿದ್ದ ಜನತೆ
ಬೆಳಗ್ಗೆ 6 ರಿಂದ 10ರವರೆಗೆ ಅಗತ್ಯ ಸಾಮಾಗ್ರಿಗಳ ಖರೀದಿಗೆ ಅವಕಾಶ ನೀಡಿದ್ದರೂ, ಜನರು ಅವಶ್ಯಕ ಸಾಮಾಗ್ರಿಗಳ ಖರೀದಿಗೆ ಮುಗಿಬಿದ್ದಿದ್ದಾರೆ.
Louckdown
ಬೆಳಗ್ಗೆ 6 ರಿಂದ 10ರವರೆಗೆ ಅಗತ್ಯ ಸಾಮಾಗ್ರಿಗಳ ಖರೀದಿಗೆ ಅವಕಾಶ ನೀಡಿದ್ದರೂ, ಜನರು ಅವಶ್ಯಕ ಸಾಮಾಗ್ರಿಗಳ ಖರೀದಿಗೆ ಇಂದೇ ಮುಗಿಬಿದ್ದಿದ್ದಾರೆ. ಮಾರುಕಟ್ಟೆಯಲ್ಲಿ ಸುತ್ತಮುತ್ತ, ರಸ್ತೆಗಳಲ್ಲಿಯೂ ವಾಹನಗಳ ಓಡಾಟ ಜೋರಾಗಿತ್ತು. ಜನರು 14 ದಿನಗಳ ಲಾಕ್ ಡೌನ್ ಭೀತಿಯಿಂದ ಇಂದೇ ರಸ್ತೆಗಿಳಿದಿದ್ದು ಕಂಡು ಬಂದಿದೆ.
ಮಾರುಕಟ್ಟೆಗಳಲ್ಲಿ ತರಕಾರಿ, ಮೀನು, ಇನ್ನಿತರ ಅಗತ್ಯ ವಸ್ತುಗಳ ಖರೀದಿ ಬಹಳ ಜೋರಾಗಿತ್ತು. ಒಟ್ಟಿನಲ್ಲಿ ಲಾಕ್ ಡೌನ್ ಭೀತಿಯಿಂದ ಜನರು 15 ದಿನಗಳಿಗಾಗುವಷ್ಟು ವಸ್ತುಗಳ ಖರೀದಿ ನಡೆಸಿದ್ದಾರೆ.