ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕುಲಶೇಖರದಲ್ಲಿ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿದ ಪರಿಣಾಮ ಮಂಗಳೂರು-ಮುಂಬೈ ನಡುವೆ ರೈಲು ಸಂಚಾರ ಅಸ್ಯವ್ಯಸ್ತವಾಗಿದೆ.
ಕುಲಶೇಖರದಲ್ಲಿ ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ: ಮಂಗಳೂರು-ಮುಂಬೈ ರೈಲು ಸಂಚಾರ ಅಸ್ತವ್ಯಸ್ತ - surathkal railway station
ರೈಲ್ವೆ ಹಳಿ ಮೇಲೆ ಗುಡ್ಡ ಕುಸಿದ ಪರಿಣಾಮ ಮಂಗಳೂರು- ಮುಂಬೈ ನಡುವೆ ರೈಲು ಸಂಚಾರ ಅಸ್ಯವ್ಯಸ್ತವಾಗಿದೆ. ಹಳಿಗೆ ಬಿದ್ದ ಮಣ್ಣು ತೆರವು ಕಾರ್ಯ ನಡೆಯುತ್ತಿದೆ.
ಮಂಗಳೂರು ಸೆಂಟ್ರಲ್ನಿಂದ ಮುಂಬೈಗೆ ಹೊರಡಬೇಕಾದ ರೈಲನ್ನು ಸುರತ್ಕಲ್ ರೈಲ್ವೆ ನಿಲ್ದಾಣದಿಂದ ಬಿಡಲಾಗುತ್ತಿದೆ. ಮಂಗಳೂರು ರೈಲ್ವೆ ನಿಲ್ದಾಣದಿಂದ ಪ್ರಯಾಣಿಕರಿಗೆ ಸುರತ್ಕಲ್ಗೆ ಬಸ್ ವ್ಯವಸ್ಥೆ ಮಾಡಲಾಗಿದೆ. ಮಂಗಳೂರಿಗೆ ಬರಬೇಕಾದ ರೈಲನ್ನು ಸುರತ್ಕಲ್ನಲ್ಲಿ ನಿಲ್ಲಿಸಿ ಅಲ್ಲಿಂದ ಮಂಗಳೂರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ.
ಮುಂಬೈನಿಂದ ಬರುವ ರೈಲನ್ನು ಸುರತ್ಕಲ್ನಲ್ಲಿ ನಿಲ್ಲಿಸಿ. ಅದೇ ರೈಲನ್ನು ಮುಂಬೈಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ರೈಲ್ವೆ ಹಳಿಗೆ ಬಿದ್ದ ಮಣ್ಣನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ರಾತ್ರಿಯ ವೇಳೆಗೆ ತೆರವು ಕಾರ್ಯಾಚರಣೆ ಮುಗಿಯಬಹುದು ಎಂದು ನಿರೀಕ್ಷಿಸಲಾಗಿದ್ದು, ಬಳಿಕ ರೈಲು ಓಡಾಟ ಸಹಜ ಸ್ಥಿತಿಗೆ ಬರಲಿದೆ.