ಕರ್ನಾಟಕ

karnataka

ETV Bharat / state

ಸರ್ಕಾರಿ-ಖಾಸಗಿ ಮೆಡಿಕಲ್ ಆಸ್ಪತ್ರೆಗಳಲ್ಲಿ ವೆಂಟಿಲೇಟರ್​ಗಳ ಕೊರತೆ : ಆರೋಪ ತಳ್ಳಿಹಾಕಿದ ವೈದ್ಯರು - Mangaluru latest news

ಕೆಲ ಸೋಂಕಿತರಿಗೆ ವೆಂಟಿಲೇಟರ್​​ಗಳು ಅಗತ್ಯವಿರುವ ಹಿನ್ನೆಲೆ ಸಾಮಾನ್ಯವಾಗಿ ಎಲ್ಲಾ ಆಸ್ಪತ್ರೆಗಳಲ್ಲಿಯೂ ಬ್ಯುಸಿ ಇರುತ್ತದೆ‌. ಆದರೂ ಅಗತ್ಯವಿರುವ ಸೋಂಕಿತರಿಗೆ ಯಾವ ಆಸ್ಪತ್ರೆಗಳಲ್ಲಿ ವೆಂಟಿಲೇಟರ್​​ಗಳು ಖಾಲಿ ಇವೆ..

Lack of ventilator in Mangaluru
ವೆನ್ಲಾಕ್​ ಜಿಲ್ಲಾ ಆಸ್ಪತ್ರೆ

By

Published : Sep 7, 2020, 9:00 PM IST

ಮಂಗಳೂರು : ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಾಣುತ್ತಿರುವ ನಡುವೆಯೇ ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಮೆಡಿಕಲ್ ಕಾಲೇಜು‌, ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ​ಕೊರತೆಯಾಗಿವೆ ಎಂಬ ಆರೋಪ ಕೇಳಿ ಬಂದಿದೆ.

ಜಿಲ್ಲೆಯಲ್ಲಿ ದಿನವೂ 200-300 ಮಂದಿ ಸೋಂಕಿತರು ಕಂಡು ಬರುತ್ತಿದ್ದಾರೆ, ಮೃತರ ಸಂಖ್ಯೆಯೂ ಅಧಿಕವಾಗುತ್ತಿದೆ. ಆದರೆ, ರೋಗಿಗಳಿಗೆ ಅಗತ್ಯದ ವೆಂಟಿಲೇಟರ್​ಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರವಲ್ಲ ಖಾಸಗಿ ಮೆಡಿಕಲ್ ಆಸ್ಪತ್ರೆಗಳಲ್ಲಿಯೂ ಕೊರತೆ ಇದೆ ಎಂಬ ಆರೋಪ ಕೇಳಿ ಬರುತ್ತಿವೆ.

ಈ ಬಗ್ಗೆ ಈಟಿವಿ ಭಾರತದೊಂದಿಗೆ ದೂರವಾಣಿ ಮೂಲಕ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯಿರಿ ಮಾತನಾಡಿ, ಜಿಲ್ಲೆಯ ಆಸ್ಪತ್ರೆಗಳಲ್ಲಿ ವೆಂಟಿಲೇಟರ್​​ಗಳ ಕೊರತೆ ಇದೆ ಅನ್ನೋದು ಸುಳ್ಳು. ಕೆಲ ಸೋಂಕಿತರಿಗೆ ವೆಂಟಿಲೇಟರ್​​ಗಳು ಅಗತ್ಯವಿರುವ ಹಿನ್ನೆಲೆ ಸಾಮಾನ್ಯವಾಗಿ ಎಲ್ಲಾ ಆಸ್ಪತ್ರೆಗಳಲ್ಲಿಯೂ ಬ್ಯುಸಿ ಇರುತ್ತದೆ‌. ಆದರೂ ಅಗತ್ಯವಿರುವ ಸೋಂಕಿತರಿಗೆ ಯಾವ ಆಸ್ಪತ್ರೆಗಳಲ್ಲಿ ವೆಂಟಿಲೇಟರ್​​ಗಳು ಖಾಲಿ ಇವೆ ಎಂದು ಮಾಹಿತಿ ನೀಡುತ್ತೇವೆ‌‌ ಎಂದರು.

ಸುಮಾರು 85% ಸೋಂಕಿತರಿಗೆ ಅಗತ್ಯವಿರುವ ಆಕ್ಸಿಜನ್ ಬೆಡ್​ಗಳು ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲಿ ಲಭ್ಯ ಇವೆ. ಸುಮಾರು 3% ಸೋಂಕಿತರಿಗೆ ಐಸಿಯು ಅಗತ್ಯವಿದೆ. ಆದರೆ, 2% ಸೋಂಕಿತರಿಗೆ ಮಾತ್ರ ವೆಂಟಿಲೇಟರ್​​ಗಳು ಅಗತ್ಯವಿದೆ. ಹಾಗಾಗಿ, ವೆಂಟಿಲೇಟರ್​​ಗಳ ಕೊರತೆ ಉದ್ಭವಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ABOUT THE AUTHOR

...view details