ಮಂಗಳೂರು: ಶಿಕ್ಷಕರ ಇಂದಿನ ಪರಿಸ್ಥಿತಿ ಸುಧಾರಿಸಲು ತಕ್ಷಣ ಸರ್ಕಾರ ಸರ್ವೇ ಮಾಡಲು ಒಂದು ತಂಡ ರಚಿಸಬೇಕು ಎಂದು ವಿಶ್ರಾಂತ ಪ್ರಾಂಶುಪಾಲ ಡಾ.ಎಂ.ಪ್ರಭಾಕರ ಜೋಶಿ ಸರ್ಕಾರಕ್ಕೆ ಮನವಿ ಮಾಡಿದರು.
ಕನ್ನಡ ಪ್ರಾಥಮಿಕ ಶಾಲೆಗಳೇ ನಮ್ಮ ಕಲೆ, ಸಾಹಿತ್ಯಕ್ಕೆ ಮೂಲ: ಡಾ.ಎಂ.ಪ್ರಭಾಕರ ಜೋಶಿ
ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ಎಂ.ಪ್ರಭಾಕರ ಜೋಶಿ ,ಶಾಲೆಗಳ ಅಭಿವೃದ್ಧಿ ಮೊದಲಿಗೆ ಆಗಬೇಕಿದೆ. ಇದಕ್ಕಾಗಿ ಶಾಲೆಗಳ ಅಭಿವೃದ್ಧಿ ಮಂಡಳಿಯನ್ನು ಬಳಸಿ, ಶಾಲೆಗಳಿಗೆ ಬಳಸುವ ಪರಿಕರ, ಕಟ್ಟಡ, ಭದ್ರತೆಗೆ ಮೊದಲ ಆದ್ಯತೆ ನೀಡುವ ಕೆಲಸ ಆಗಬೇಕು ಎಂದರು.
ಶಿಕ್ಷಕರ ದಿನಾಚರಣೆ
ದ.ಕ.ಜಿಲ್ಲಾ ಮಟ್ಟದ ಹಾಗೂ ಮಂಗಳೂರು ವಲಯ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಮೊದಲಾಗಿ ಆಗಬೇಕಾದದ್ದು, ಶಾಲೆಗಳ ಅಭಿವೃದ್ಧಿ. ಆದ್ದರಿಂದ ಶಾಲೆಗಳ ಅಭಿವೃದ್ಧಿ ಮಂಡಳಿಯನ್ನು ಬಳಸಿ, ಶಾಲೆಗಳಿಗೆ ಬಳಸುವ ಪರಿಕರ, ಕಟ್ಟಡ, ಭದ್ರತೆಗೆ ಮೊದಲ ಆದ್ಯತೆ ನೀಡುವ ಕೆಲಸ ಆಗಬೇಕು ಎಂದರು.
ಕನ್ನಡ ಪ್ರಾಥಮಿಕ ಶಾಲೆಗಳೇ ನಮ್ಮ ಕಲೆ ಸಾಹಿತ್ಯಗಳಿಗೆ ಮೂಲ. ಸರ್ಕಾರವೇ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಪ್ರಾರಂಭ ಮಾಡಿದೆ. ಇದರಿಂದ ನಮ್ಮ ರಾಜ್ಯದ ಭಾಷೆ ಕನ್ನಡ ಅಲ್ಲ ಎಂಬುದನ್ನು ಸರ್ಕಾರವೇ ಒಪ್ಪಿದಂತಾಗುತ್ತದೆ ಎಂದು ಇಂಗ್ಲಿಷ್ ಶಿಕ್ಷಣವನ್ನು ವಿರೋಧಿಸಿದರು.