ಕರ್ನಾಟಕ

karnataka

ETV Bharat / state

ಮೋದಿ ಸರಿಯಿಲ್ಲ ಎಂದು ಹೇಳಿಕೊಟ್ಟಿದ್ದೇ ಪೂಜಾರಿ: ಖಾದರ್​ - ಲೋಕಸಭಾ ಚುನಾವಣೆ

ಜನಾರ್ದನ ಪೂಜಾರಿಯವರ ಹೇಳಿಕೆ ನಂಬಲು ಅಸಾಧ್ಯ. ಅವರು ನಮಗೆಲ್ಲಾ ಗುರು ಸಮಾನರು. ಅವರೇ ನಮಗೆ ನರೇಂದ್ರ ಮೋದಿಯವರು ಸರಿಯಿಲ್ಲ ಎಂದು ಹೇಳಿಕೊಟ್ಟದ್ದು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು.

ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್

By

Published : Mar 17, 2019, 7:57 PM IST

ಮಂಗಳೂರು:ಮೋದಿಯವರಿಂದ ಭ್ರಷ್ಟಾಚಾರ ನಿವಾರಣೆಯಾಗಿದೆ ಎಂಬ ಜನಾರ್ದನ ಪೂಜಾರಿಯವರ ಹೇಳಿಕೆ ನಂಬಲು ಅಸಾಧ್ಯ. ಅವರು ನಮಗೆಲ್ಲಾ ಗುರು ಸಮಾನರು. ಅವರೇ ನಮಗೆ ನರೇಂದ್ರ ಮೋದಿಯವರು ಸರಿಯಿಲ್ಲ ಎಂದು ಹೇಳಿಕೊಟ್ಟದ್ದು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು.

ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್

ನಗರದ ಮಲ್ಲಿಕಟ್ಟೆಯಲ್ಲಿರುವ ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಮಧ್ಯಾಹ್ನ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ ರಹಿತ ಆಡಳಿತ ನೀಡಿದವರು ಎಂದು ರಾಹುಲ್ ಗಾಂಧಿಯವರ ಹೆಸರು ಹೇಳುವ ಬದಲು ಅವರು ತಪ್ಪಿ ಮೋದಿ ಹೆಸರು ಹೇಳಿರಬಹುದು ಎಂದು ಜನಾರ್ದನ ಪೂಜಾರಿ ಹೇಳಿಕೆಯನ್ನ ಸಮರ್ಥಿಸಿಕೊಂಡರು.

ಈ ಹಿಂದೆ ಕೆಟ್ಟ ಶಬ್ಧಗಳಿಂದ ಪೂಜಾರಿಯವರನ್ನು ನಿಂದಿಸಿದ ಬಿಜೆಪಿಯವರೇ ಈಗ ಅವರ ಹೇಳಿಕೆಯನ್ನು ಬೇಕಾದಂತೆ ಬಳಸಿಕೊಳ್ಳುತ್ತಿದ್ದಾರೆ. ಬಿಜೆಪಿಯವರಿಗೆ ಜನಾರ್ದನ ಪೂಜಾರಿ ಬಗ್ಗೆ ಅಭಿಮಾನ ಇದ್ದರೆ ಸೀಟು ಬಿಟ್ಟು ಕೊಡಲಿ. ಅವರಲ್ಲಿ ಲೋಕಸಭೆಗೆ ಅಭ್ಯರ್ಥಿ ಇಲ್ಲದಿದ್ದರೆ ಪೂಜಾರಿಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಬಹುದು ಎಂದು ಯು.ಟಿ.ಖಾದರ್ ಹೇಳಿದರು.

ಈ ಲೋಕಸಭಾ ಚುನಾವಣೆ ಸಂವಿಧಾನ ಉಳಿಸುವ ಚುನಾವಣೆ ಆಗಿದ್ದು, ಮೋದಿಯವರು ಕಳೆದ ಲೋಕಸಭಾ ಚುನಾವಣಾ ಪೂರ್ವದಲ್ಲಿ ನೀಡಿದ ಯಾವ ಭರವಸೆಯನ್ನು ಈಡೇರಿಸಲಿಲ್ಲ. ಅವರು ಭಾವನಾತ್ಮಕವಾಗಿ ಜನರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಮೋದಿ ವಿರುದ್ಧ ಗುಡುಗಿದರು.

ಜೆಡಿಎಸ್-ಕಾಂಗ್ರೆಸ್ ಒಟ್ಟಾಗಿ ಚುನಾವಣೆ ಎದುರಿಸುತ್ತಿದ್ದು, ಎರಡೂ ಪಕ್ಷದ ಕಾರ್ಯಕರ್ತರಿಗೂ ತಮ್ಮ ಪಕ್ಷದ ಅಭ್ಯರ್ಥಿಗಳು ಬೇಕು ಎಂಬ ಅಭಿಪ್ರಾಯ ಇರುತ್ತದೆ. ಆದರೆ ಪಕ್ಷದ ಮುಖಂಡರ ತೀರ್ಮಾನವೇ ಅಂತಿಮ‌ಎಂದು ಸಚಿವ ಯು.ಟಿ.ಖಾದರ್ ಹೇಳಿದರು.

ABOUT THE AUTHOR

...view details