ಕರ್ನಾಟಕ

karnataka

ETV Bharat / state

ಶಿರಾಡಿ ಘಾಟ್​ನಲ್ಲಿ ಭಾರೀ ಭೂಕುಸಿತ...ವಾಹನ ಸಂಚಾರ ನಿಷೇಧ

ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ಬಳಿ ಭಾರೀ ಭೂ ಕುಸಿತವಾಗಿದ್ದು, ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಬೇಕೆಂದು ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ನೀಡಿದ್ದಾರೆ.

ಶಿರಾಡಿ ಘಾಟ್​ನಲ್ಲಿ ಭಾರೀ ಭೂಕುಸಿತ...ವಾಹನ ಸಂಚಾರ ಸಂಪೂರ್ಣ ಸ್ಥಗಿತ

By

Published : Aug 9, 2019, 11:43 PM IST

ಮಂಗಳೂರು:ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ಬಳಿ ಭಾರೀ ಭೂ ಕುಸಿತವಾಗಿದ್ದು, ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಬೇಕೆಂದು ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ನೀಡಿದ್ದಾರೆ.

ಶಿರಾಡಿ ಘಾಟ್​ನಲ್ಲಿ ಭಾರೀ ಭೂಕುಸಿತ...ವಾಹನ ಸಂಚಾರ ಸಂಪೂರ್ಣ ಸ್ಥಗಿತ

ಇಂದು ಸುರಿದ ಬಿರುಗಾಳಿ ಸಹಿತ ಭಾರೀ ಗಾಳಿ -ಮಳೆಗೆ ಶಿರಾಡಿ ಘಾಟ್​ನಲ್ಲಿ ಬೃಹತ್ ಗಾತ್ರದ ಮರಗಳು ಹೆದ್ದಾರಿ ಮೇಲೆ ಬಿದ್ದಿವೆ. ಮಳೆ ,ಗಾಳಿಯು ಇದೇ ರೀತಿ ಮುಂದುವರಿದಲ್ಲಿ ಮತ್ತಷ್ಟು ಮರಗಳು ನೆಲಕ್ಕುರುಳುವ ಸಾಧ್ಯತೆ ಇದೆ. ಹೀಗಾಗಿ ಸಂಚಾರಕ್ಕೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗಲಿದೆ. ಈ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಶಿರಾಡಿ ಘಾಟ್​ನಲ್ಲಿ ವಾಹನ ಸಂಚಾರವನ್ನು ಸಂಪೂರ್ಣ ಸ್ಥಗಿತ ಗೊಳಿಸಲಾಗಿದೆ.

ಶಿರಾಡಿ ಘಾಟ್ ಬಳಿ‌ ಇನ್ನೂ, ಮೂರು ದಿನಗಳ ಕಾಲ ಭಾರೀ ಮಳೆ ಸುರಿಯುವ ಮುನ್ಸೂಚನೆಯಿಂದ ಕಾರ್ಯಪಾಲಕ ಇಂಜಿನಿಯರ್ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಾಹನ‌ ಸಂಚಾರ ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದರು. ಈ ಹಿನ್ನೆಲೆ ದ.ಕ.ಜಿಲ್ಲಾಧಿಕಾರಿ ಈ ಆದೇಶ ಹೊರಡಿಸಿದ್ದಾರೆ.

ABOUT THE AUTHOR

...view details