ಬಂಟ್ವಾಳ: ತಾಲೂಕಿನ ನಾನಾ ಕಡೆಗಳಲ್ಲಿ ಗಣೇಶ ಚತುರ್ಥಿಯನ್ನು ಸರಳವಾಗಿ ಆಚರಿಸಲಾಯಿತು. ಸುಮಾರು 45 ಸಾರ್ವಜನಿಕ ಗಣೇಶೋತ್ಸವ ಸಮಿತಿಗಳಿದ್ದು, 38 ಕಡೆಗಳಲ್ಲಿ ವಿಗ್ರಹವಿಟ್ಟು ಪೂಜೆ ಸಲ್ಲಿಸಿ, ಬಳಿಕ ಮೆರವಣಿಗೆ ಇಲ್ಲದೆ ಸರಳವಾಗಿ ವಿಗ್ರಹ ವಿಸರ್ಜನೆ ಮಾಡಲಾಯಿತು.
ಬಂಟ್ವಾಳ ತಾಲೂಕಿನಲ್ಲಿ ಸರಳ ಗಣೇಶ ಚತುರ್ಥಿ ಆಚರಣೆ
ಸುಮಾರು 45 ಸಾರ್ವಜನಿಕ ಗಣೇಶೋತ್ಸವ ಸಮಿತಿಗಳಿದ್ದು, 38 ಕಡೆಗಳಲ್ಲಿ ವಿಗ್ರಹವಿಟ್ಟು ಪೂಜೆ ಸಲ್ಲಿಸಿ, ಬಳಿಕ ಮೆರವಣಿಗೆ ಇಲ್ಲದೆ ಸರಳವಾಗಿ ವಿಗ್ರಹ ವಿಸರ್ಜನೆ ಮಾಡಲಾಯಿತು.
Ganesha festival in Bantwala
ಬಿ.ಸಿ. ರೋಡ್ನ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದಲ್ಲಿ (ಮೂರ್ತಿ ಪ್ರತಿಷ್ಠಾಪನೆ ಆರಂಭವಾಗಿ ಇದು 41ನೇ ವರ್ಷದ ಆಚರಣೆ) ಗಣಪತಿ ಪ್ರತಿಷ್ಠಾಪನೆ, ಜಕ್ರಿಬೆಟ್ಟುವಿನಲ್ಲಿ ಮಾಜಿ ಸಚಿವ ರಮಾನಾಥ ರೈ ನೇತೃತ್ವದಲ್ಲಿ (17ನೇ ವರ್ಷದ ಆಚರಣೆ) ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು. ಕಲ್ಲಡ್ಕ, ಫರಂಗಿಪೇಟೆ, ಕಂಬಳಬೆಟ್ಟು, ವಿಟ್ಲ ಸಹಿತ ಹಲವೆಡೆ ವಿಗ್ರಹ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ಈ ವೇಳೆ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಕೊರೊನಾ ನಿವಾರಣೆಗೆ ವಿಶೇಷವಾಗಿ ಕೆಲವೆಡೆ ಪ್ರಾರ್ಥನೆ ಸಲ್ಲಿಸಲಾಯಿತು.