ಕರ್ನಾಟಕ

karnataka

ETV Bharat / state

2023ರ ಚುನಾವಣೆಯಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣ : ಮಾಜಿ ಪ್ರಧಾನಿ ದೇವೇಗೌಡ ಭವಿಷ್ಯ - ಮಂಗಳೂರಿನಲ್ಲಿ ಮಾಜಿ ಪ್ರಧಾನಿ ದೇವೆಗೌಡ ಭವಿಷ್ಯ

ಮುಂದಿನ ಪಂಚರಾಜ್ಯ ಚುನಾವಣೆ ಫಲಿತಾಂಶದ ಬಳಿಕ ದೇಶದಲ್ಲಿ ಕೆಲವು ಬೆಳವಣಿಗೆ ನಡೆಯುತ್ತದೆ. ಪಂಚ ರಾಜ್ಯಗಳನ್ನು ಗೆಲ್ಲಲು ಮೋದಿಯವರು ಶ್ರಮ ಪಡುತ್ತಿದ್ದಾರೆ. ಅದಕ್ಕೆ ಪರ್ಯಾಯವಾಗಿ ಪ್ರಾದೇಶಿಕ ಪಕ್ಷಗಳು ಪ್ರಯತ್ನ ಪಡುತ್ತಿವೆ. ಪಂಚರಾಜ್ಯ ಚುನಾವಣೆ ಬಳಿಕ ರಾಜಕೀಯವಾಗಿ ಕೆಲವು ಬೆಳವಣಿಗೆ ನಡೆಯಲಿದೆ..

ಮಾಜಿ ಪ್ರಧಾನಿ ದೇವೆಗೌಡ ಭವಿಷ್ಯ
ಮಾಜಿ ಪ್ರಧಾನಿ ದೇವೆಗೌಡ ಭವಿಷ್ಯ

By

Published : Feb 12, 2022, 7:58 PM IST

ಮಂಗಳೂರು :2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಭವಿಷ್ಯ ನುಡಿದಿದ್ದಾರೆ.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಬಳಿಕ ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಬರಲಿದೆ. ಹಿಂದೆ ಕುಮಾರಸ್ವಾಮಿ ಅವರು ಬಿಜೆಪಿ ಜೊತೆಗೆ ಸರಕಾರ ನಡೆಸಿದಾಗ ನನ್ನನ್ನು ಹೊರಗೆ ಇಟ್ಟಿದ್ದರು.

ನಾನು ಏಕಾಂಗಿಯಾಗಿ ಇದ್ದೆ. ಮತ್ತೆ ಪಕ್ಷವನ್ನು ಕಟ್ಟಿದ್ದೇನೆ. ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಇದ್ದೇನೆ. ಎರಡು ಪಾರ್ಟಿಗಳ ಜೊತೆಗೆ ನನಗೆ ಕ್ಲೇಷ ಇಲ್ಲ. ನಾನು ರಾಜ್ಯಸಭಾ ಸದಸ್ಯನಾಗಲು ಸೋನಿಯಾ ಗಾಂಧಿ ಮತ್ತು ಮೋದಿ ಸಹಾಯ ಮಾಡಿದ್ದಾರೆ.

ನನ್ನ ಹತ್ತಿರ ಯಾರಾದರು ಬರಬಹುದು. ಯಾವುದನ್ನು ಈಗಲೇ ಹೇಳಲ್ಲ. ಮುಂದೆ ಸಮ್ಮಿಶ್ರ ಸರ್ಕಾರ ಬರಲಿದೆ. 125 ಸೀಟು ಗೆಲ್ಲುತ್ತೇವೆ ಎಂದು ಹೇಳುವವರ ಬಂಡವಾಳ ಗೊತ್ತಿದೆ. ನನ್ನ ಬೆಂಬಲ ಜಾತ್ಯಾತೀತ ಪಕ್ಷಗಳಿಗೆ ಎಂದರು.

2023ಕ್ಕೆ ರಾಜ್ಯ ವಿಧಾನಸಭಾ ಚುನಾವಣೆ ಭವಿಷ್ಯ ನುಡಿದ ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡರು..

ಮುಂದಿನ ಪಂಚ ರಾಜ್ಯ ಚುನಾವಣೆ ಫಲಿತಾಂಶದ ಬಳಿಕ ದೇಶದಲ್ಲಿ ಕೆಲವು ಬೆಳವಣಿಗೆ ನಡೆಯುತ್ತದೆ. ಪಂಚ ರಾಜ್ಯಗಳನ್ನು ಗೆಲ್ಲಲು ಮೋದಿಯವರು ಶ್ರಮ ಪಡುತ್ತಿದ್ದಾರೆ. ಅದಕ್ಕೆ ಪರ್ಯಾಯವಾಗಿ ಪ್ರಾದೇಶಿಕ ಪಕ್ಷಗಳು ಪ್ರಯತ್ನ ಪಡುತ್ತಿವೆ. ಪಂಚ ರಾಜ್ಯ ಚುನಾವಣೆ ಬಳಿಕ ರಾಜಕೀಯವಾಗಿ ಕೆಲವು ಬೆಳವಣಿಗೆ ನಡೆಯಲಿದೆ ಎಂದರು.

ಪ್ರಾದೇಶಿಕ ಪಕ್ಷಗಳ ಒಗ್ಗೂಡುವಿಕೆಗೆ ಹಲವು ಬಾರಿ ಪ್ರಯತ್ನಿಸಿದ್ದೇನೆ. ಕುಮಾರಸ್ವಾಮಿ ಸಿಎಂ ಆಗಿ ಪ್ರಮಾಣವಚನ ಮಾಡುವ ವೇಳೆ ಪ್ರಾದೇಶಿಕ ಪಕ್ಷದ 6 ರಾಜ್ಯಗಳ ಸಿಎಂ ಮತ್ತು 16 ಮುಖಂಡರುಗಳನ್ನು ಕರೆಸಿದ್ದೆ. ಆದರೆ, ಈಗ ನನ್ನ ಪಕ್ಷವನ್ನು ಬಲವರ್ಧನೆ ಮಾಡಬೇಕಿದೆ ಎಂದರು.

ಹಿಜಾಬ್ ವಿವಾದ ಕುರಿತು ಮಾತನಾಡಿದ ಅವರು, ಕರಾವಳಿ ಜಿಲ್ಲೆಗಳಲ್ಲಿ ಒಂದಲ್ಲ ಒಂದು ವಿಚಾರದಲ್ಲಿ ಸಮಸ್ಯೆ ಸೃಷ್ಟಿಸಲಾಗುತ್ತಿದೆ. ಇಂತಹ ಸಮಸ್ಯೆ ಸೃಷ್ಟಿಸಲೆಂದೇ ಕೆಲವು ಶಕ್ತಿಗಳಿವೆ. ಇದರಿಂದ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಾರೆ. ಇದು ಆಗಬಾರದು ಎಂದರು.

ಸಿ ಎಂ ಇಬ್ರಾಹಿಂ ಅವರು ಕಾಂಗ್ರೆಸ್​​ನಲ್ಲಿ ವಿಧಾನಪರಿಷತ್ ಸದಸ್ಯರಾಗಿದ್ದಾರೆ. ಹಿಂದೆ ಅವರು ನಮ್ಮ ಜೊತೆಗೆ ಇದ್ದರು. ಅವರ ಮನಸ್ಸಿನಲ್ಲಿ ಏನಿದೆ ಎಂದು ಗೊತ್ತಿಲ್ಲ. ಅವರು ಯಾವ ರೀತಿ ನಿರ್ಧರಿಸುತ್ತಾರೆ ಎಂಬುದನ್ನು ನೋಡಬೇಕು ಎಂದು ಹೇಳಿದರು.

ಕುಮಾರಸ್ವಾಮಿ ರಾಮನಗರ ಜಿಲ್ಲೆ ಬಿಟ್ಟು ಹೋಗಲ್ಲ :ಮಾಜಿ ಸಿ ಎಂ ಕುಮಾರಸ್ವಾಮಿ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ದೇವೇಗೌಡರು, ಅವರು ರಾಜ್ಯದ ಎಲ್ಲಿಯೂ ನಿಲ್ಲಬಹುದು. ಆದರೆ, ಅವರು ರಾಮನಗರ ಜಿಲ್ಲೆ ಬಿಟ್ಟು ಎಲ್ಲಿಗೂ ಹೋಗಲ್ಲ ಎಂದರು.

ಮೋದಿ ವಿನಯತೆಯಿಂದ ಮಾತಾಡ್ತಾರೆ, ಕೆಲಸ ಮಾಡಲ್ಲ!:ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಐದಾರು ಬಾರಿ ಭೇಟಿಯಾಗಿ ಚರ್ಚೆ ನಡೆಸಿದ್ದೇನೆ. ನಾನು ಮಾತಾಡುವುದನ್ನು ವಿನಯತೆಯಿಂದ ಕೇಳುತ್ತಾರೆ. ಆದರೆ, ಯಾವುದಕ್ಕೂ ಪ್ರತಿಕ್ರಿಯಿಸುವುದಿಲ್ಲ. ಹಾಸನಕ್ಕೆ ಐಐಟಿ ಸೇರಿದಂತೆ ನಾನು ಕೇಳಿದ ಕೆಲಸವನ್ನು ಮಾಡುವುದಿಲ್ಲ ಎಂದರು.

ರಾಹುಲ್ ಗಾಂಧಿ ಹೇಳಿಕೆಯಿಂದ ಹಾನಿ :ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರು ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದು ನೀಡಿದ ಹೇಳಿಕೆ ಪಕ್ಷಕ್ಕೆ ಅಪಾರ ಹಾನಿ ತಂದಿತ್ತು. ಹಾಸನದಲ್ಲಿ ಬಿಜೆಪಿ ಕ್ಷೇತ್ರ ಗೆಲ್ಲುವಂತಾಯಿತು. ಹಲವು ಸೀಟುಗಳು ನಷ್ಟವಾಯಿತು ಎಂದು ಅವರು ಹೇಳಿದರು.

ಇದನ್ನೂ ಓದಿ : ಕುಕ್ಕೆ ಸುಬ್ರಹ್ಮಣ್ಯದಲ್ಲಿ ತುಲಾಭಾರ ನೆರವೇರಿಸಿದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ದಂಪತಿ

For All Latest Updates

TAGGED:

ABOUT THE AUTHOR

...view details