ಕರ್ನಾಟಕ

karnataka

ETV Bharat / state

ಐದು ತಿಂಗಳ ವೇತನ ಬಾಕಿ: ಅಳಲು ತೋಡಿಕೊಂಡ ಇಂದಿರಾ ಕ್ಯಾಂಟೀನ್ ನೌಕರರು

ದಕ್ಷಿಣಕನ್ನಡ ಜಿಲ್ಲೆಯ ಬಿ.ಸಿ ರೋಡಿನ ಇಂದಿರಾ ಕ್ಯಾಂಟೀನ್​ ನೌಕರರಿಗೆ ಐದು ತಿಂಗಳ ವೇತನ ಪಾವತಿಯಾಗಿಲ್ಲ.ಕೆಲವು ದಿನಗಳ ಹಿಂದೆ ನೌಕರರು ಪ್ರತಿಭಟನೆ ನಡೆಸಿದ ಹಿನ್ನೆಲೆ ಒಂದು ತಿಂಗಳ ವೇತನ ಪಾವತಿಸಿದ್ದು, ನೌಕರರು ಪರದಾಡುವಂತಾಗಿದೆ.

five-months-salary-arrears-for-indira-canteen-workers-in-bantwal
ಐದು ತಿಂಗಳ ವೇತನ ಬಾಕಿ : ಅಳಲು ತೋಡಿಕೊಂಡ ಇಂದಿರಾ ಕ್ಯಾಂಟೀನ್ ನೌಕರರು

By

Published : Dec 3, 2022, 6:12 PM IST

ಬಂಟ್ವಾಳ(ದಕ್ಷಿಣ ಕನ್ನಡ) :ನಗರದ ಇಂದಿರಾ ಕ್ಯಾಂಟೀನ್ ನೌಕರರ ವೇತನ ಸಮಸ್ಯೆ ಇನ್ನೂ ಕಗ್ಗಂಟಾಗಿಯೇ ಉಳಿದಿದೆ. ಮೂರು ದಿನ ಕ್ಯಾಂಟೀನ್ ಬಂದ್ ಮಾಡಿ ಪ್ರತಿಭಟನೆ ನಡೆಸಿದ ಕಾರಣ ನೌಕರರಿಗೆ ಒಂದು ತಿಂಗಳ ವೇತನವನ್ನು ಪಾವತಿಸಲಾಗಿದೆ. ಆದರೆ, ಇನ್ನು ಐದು ತಿಂಗಳ ವೇತನ ಪಾವತಿಯಾಗಿಲ್ಲ.

ಬಿ.ಸಿ.ರೋಡಿನ ಮಿನಿ ವಿಧಾನಸೌಧ (ಈಗ ಆಡಳಿತ ಸೌಧ)ದ ಪಕ್ಕದಲ್ಲೇ ಇರುವ ಇಂದಿರಾ ಕ್ಯಾಂಟೀನ್ ಆರಂಭಗೊಂಡಂದಿನಿಂದ ನೌಕರರಿಗೆ ಸರಿಯಾಗಿ ವೇತನ ಪಾವತಿಯಾಗುತ್ತಿಲ್ಲ. ಈ ಬಗ್ಗೆ ನೌಕರರು ಪ್ರತಿಭಟನೆ ನಡೆಸಿದ ಬಳಿಕ ಗುತ್ತಿಗೆ ವಹಿಸಿಕೊಂಡ ಏಜೆನ್ಸಿಯವರು ಒಂದೆರಡು ಸಲ ವೇತನ ಪಾವತಿ ಮಾಡಿದ್ದು ಬಿಟ್ಟರೆ, ಮತ್ತೆ ಅದೇ ಸಮಸ್ಯೆ. ಈ ಬಗ್ಗೆ ಏಜೆನ್ಸಿಯವರನ್ನು ಕೇಳಿದರೆ ನೀವು ಡಿ.ಸಿ.ಗೆ ದೂರು ನೀಡಿ ಎಂದು ಹೇಳಿದ್ದು, ಹೀಗಾಗಿ ಕ್ಯಾಂಟೀನ್ ನೌಕರರು ಕಂಗಾಲಾಗಿದ್ದಾರೆ.

ಐದು ತಿಂಗಳ ವೇತನ ಬಾಕಿ : ಅಳಲು ತೋಡಿಕೊಂಡ ಇಂದಿರಾ ಕ್ಯಾಂಟೀನ್ ನೌಕರರು

'ಕೊರೊನಾ ಬಂದಾಗಲೂ ನಾವು ಕ್ಯಾಂಟೀನ್ ತೆರೆದಿದ್ದು, ಸೇವೆ ನೀಡಿದ್ದೆವು. ಕ್ಯಾಂಟೀನ್ ಆರಂಭದ ದಿನದಿಂದ ಇದುವರೆಗೂ ಸರಿಯಾದ ವೇತನ ದೊರಕುತ್ತಿಲ್ಲ. ಅದರಲ್ಲೂ ನಮಗೆ ಆರು ತಿಂಗಳಿಂದ ಸರಿಯಾಗಿ ವೇತನ ಪಾವತಿಸಿಲ್ಲ. ಈ ಹಿನ್ನೆಲೆಯಲ್ಲಿ ನ.30ರಿಂದ ಮೂರು ದಿನ ನಾವು ಕ್ಯಾಂಟೀನ್ ಬಂದ್ ಮಾಡಿದ್ದೆವು. ಇದೀಗ ಒಂದು ತಿಂಗಳ ಸಂಬಳವನ್ನು ಹಾಕಿದ್ದು, ಇನ್ನು ಐದು ತಿಂಗಳ ವೇತನ ಬಾಕಿ ಇದೆ. ಆದರೂ ಬಡ ಜನರಿಗಾಗಿ ನಾವು ಕ್ಯಾಂಟೀನ್ ತೆರೆದಿದ್ದೇವೆ ಎಂದು ನೌಕರ ಆನಂದ ಪೂಜಾರಿ ಹೇಳಿದ್ದಾರೆ.

ಬಿ.ಸಿ.ರೋಡಿನಲ್ಲಿರುವ ಕ್ಯಾಂಟೀನ್ ನೌಕರರಿಗಷ್ಟೇ ಅಲ್ಲದೆ, ಹಲವೆಡೆ ಇಂದಿರಾ ಕ್ಯಾಂಟೀನ್ ನೌಕರರಿಗೆ ಸರಿಯಾದ ವೇತನ ಬಂದಿಲ್ಲ. ಮೊನ್ನೆ ಪ್ರತಿಭಟನಾರ್ಥವಾಗಿ ಬಂದ್ ಮಾಡಿದ ಕಾರಣ ಇದರ ಗುತ್ತಿಗೆ ನಿರ್ವಹಿಸುವವರು ಒಂದು ತಿಂಗಳ ವೇತನ ನೀಡಿ ನೀವು ಬಂದ್ ಮಾಡಬೇಡಿ, ಎಂದಿದ್ದಾರೆ. ಆದರೆ, ಐದು ತಿಂಗಳ ವೇತನ ಒಮ್ಮೆಗೇ ಸಿಗುವುದು ಅನುಮಾನವಾಗಿದೆ. ಇಲ್ಲಿಗೆ 10 ರೂಗೆ ಊಟ, 5 ರೂಗೆ ತಿಂಡಿ ಸೇವಿಸಲು ಬರುವವರು ಬಡವರು. ಹೀಗಾಗಿ ಅವರಿಗೆ ತೊಂದರೆ ಆಗಬಾರದು ಎಂಬ ಕಳಕಳಿಯಿಂದ ಕೆಲಸ ಮಾಡುತ್ತಿರುವುದಾಗಿ ನೌಕರರು ಹೇಳುತ್ತಾರೆ.

ಇದನ್ನೂ ಓದಿ :ಸರ್ಕಾರ ನೀಡುವ ಮನೆಗಳಲ್ಲಿ ಶೇ.3 ರಷ್ಟು ದಿವ್ಯಾಂಗರಿಗೆ ಮೀಸಲು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ABOUT THE AUTHOR

...view details