ಮಂಗಳೂರು: ಕೆಎಸ್ಆರ್ಟಿಸಿ ಬಸ್ ಡಿಕ್ಕಿಯಿಂದ ಗಾಯಗೊಂಡಿದ್ದ ಬೈಕ್ ಸವಾರನನ್ನು ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ಅವರ ಕಾರಿನಲ್ಲಿಯೇ ಚಾಲಕ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
ಅಪಘಾತದಲ್ಲಿ ಬೈಕ್ ಸವಾರನಿಗೆ ಗಾಯ: ಮಾಜಿ ಶಾಸಕರ ಕಾರಲ್ಲೇ ಆಸ್ಪತ್ರೆಗೆ ರವಾನಿಸಿದ ಚಾಲಕ - etv bharatha
ಅಪಘಾತದಲ್ಲಿ ಗಾಯಗೊಂಡ ಸವಾರನನ್ನ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ದಾಖಲಿಸಿದ ಮಾಜಿ ಶಾಸಕರ ಕಾರು ಚಾಲಕ. ಮಾನವೀಯತೆ ಮೆರೆದ ಚಾಲಕ ಕೈಕಂಬ ಕಾರ್ಯಕ್ಕೆ ಎಲ್ಲೆಡೆ ವ್ಯಾಪಕ ಪ್ರಶಂಸೆ .
ಬಂಟ್ವಾಳದ ಜಕ್ರಿಬೆಟ್ಟು ಎಂಬಲ್ಲಿ ಈ ಘಟನೆ ನಡೆದಿದೆ. ಬೆಂಗಳೂರಿನಿಂದ ಬಂಗೇರ ಅವರು ವಿಮಾನದಲ್ಲಿ ಮಂಗಳೂರಿಗೆ ಇಂದು ವಾಪಾಸಾಗಿದ್ದರು. ಕಾರು ಚಾಲಕ ನೌಶದ್ ಕೈಕಂಬ ಅವರು ವಸಂತ ಬಂಗೇರರನ್ನು ಕರೆತರಲು ತೆರಳುತ್ತಿದ್ದರು. ಆಗ ಅಪಘಾತದಲ್ಲಿ ಗಾಯಗೊಂಡವರನ್ನು ನೋಡಿದ ಮಾಜಿ ಶಾಸಕರ ಚಾಲಕ ಅದೇ ಕಾರಿನಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಗಾಯಾಳುವನ್ನು ಬಿ.ಸಿ ರೋಡ್ ಆಸ್ಪತ್ರೆಗೆ ದಾಖಲಿಸಿ ಬಳಿಕ ಮಾಜಿ ಶಾಸಕರನ್ನು ವಿಮಾನ ನಿಲ್ದಾಣದಿಂದ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ಘಟನೆ ಮಾಹಿತಿ ಪಡೆದ ವಸಂತ ಬಂಗೇರ, ಮರಳಿ ಬರುವಾಗ ಆಸ್ಪತ್ರೆಗೆ ತೆರಳಿ ಗಾಯಾಳುವಿನ ಆರೋಗ್ಯ ವಿಚಾರಿಸಿದ್ದಾರೆ.