ಮಂಗಳೂರು:ಕಲ್ಲುಗುಡ್ಡೆ-ನಿಡ್ಡೆ-ರೆಂಜಿಲಾಡಿಯ ರಸ್ತೆಯಲ್ಲಿ ಗುಂಡಿ ಬಿದ್ದು ತಿಂಗಳುಗಳು ಕಳೆದರೂ, ಸ್ಥಳೀಯ ಆಡಳಿತ ಮಾತ್ರ ದುರಸ್ತಿ ಕೆಲಸಕ್ಕೆ ಮುಂದಾಗಿರಲಿಲ್ಲ. ಆದರೆ ಈಟಿವಿ ಭಾರತ್ ನೂಜಿಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸದಾನಂದ ಅವರ ಗಮನಕ್ಕೆ ಈ ವಿಷಯವನ್ನು ತಿಳಿಸಿತ್ತು. ನಿನ್ನೆ ಈ ಬಗ್ಗೆ ಈಟಿವಿ ಸಚಿತ್ರ ವರದಿ ಪ್ರಕಟಿಸಿತ್ತು, ವರದಿ ಪ್ರಕಟವಾದ ದಿನದ ಸಾಯಂಕಾಲವೇ ಗುಂಡಿ ತಾತ್ಕಾಲಿಕವಾಗಿ ಮುಚ್ಚಿ ಪಂಚಾಯತ್ ಅಧ್ಯಕ್ಷರು ಆ ಚಿತ್ರವನ್ನು ಈಟಿವಿ ಪ್ರತಿನಿಧಿಗೆ ಕಳುಹಿಸಿ ಕೊಟ್ಟಿದ್ದಾರೆ.
ಈಟಿವಿ ಭಾರತ ವರದಿ ಆಫ್ಟರ್ ಶಾಕ್... ಗುಂಡಿ ಮುಚ್ಚಿ ಭೇಷ್ ಎನಿಸಿಕೊಂಡ ಗ್ರಾಮಪಂಚಾಯಿತಿ
ಕಲ್ಲುಗುಡ್ಡೆ-ನಿಡ್ಡೆ-ರೆಂಜಿಲಾಡಿಯ ರಸ್ತೆಯಲ್ಲಿ ಗುಂಡಿ ಬಿದ್ದು ತಿಂಗಳುಗಳು ಕಳೆದರೂ, ಸ್ಥಳೀಯ ಆಡಳಿತ ಮಾತ್ರ ದುರಸ್ತಿ ಕೆಲಸಕ್ಕೆ ಮುಂದಾಗಿರಲಿಲ್ಲ.ಹೀಗಾಗಿ ನಿನ್ನೆ ಈ ಬಗ್ಗೆ ಈಟಿವಿ ಸಚಿತ್ರ ವರದಿ ಪ್ರಕಟಿಸಿತ್ತು,ವರದಿ ಪ್ರಕಟವಾದ ದಿನದ ಸಾಯಂಕಾಲವೇ ಗುಂಡಿ ತಾತ್ಕಾಲಿಕವಾಗಿ ಮುಚ್ಚಿ ಪಂಚಾಯತ್ ಅಧ್ಯಕ್ಷರು ಆ ಚಿತ್ರವನ್ನು ಈಟಿವಿ ಪ್ರತಿನಿಧಿಗೆ ಕಳುಹಿಸಿ ಕೊಟ್ಟಿದ್ದಾರೆ.
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಅನುದಾನದಲ್ಲಿ ನಿರ್ಮಾಣವಾದ ಸುಮಾರು 5.44 ಕಿ.ಮೀ. ಉದ್ದದ ಈ ರಸ್ತೆಯಲ್ಲಿ, ಒಂದು ಸೇತುವೆಯಿದೆ ಎಂಬುದಾಗಿ ನಾಮಫಲಕದಲ್ಲಿ ತೋರಿಸಲಾಗಿದೆ. ಇದರಲ್ಲಿ ಗುತ್ತಿಗೆದಾರ ವಿವರ, ಕಾಮಗಾರಿ ಮಾಡಿದ ವರ್ಷ,ಸಂಪರ್ಕ ಸಂಖ್ಯೆ ಯಾವುದೂ ಇರಲಿಲ್ಲ. ಈ ರಸ್ತೆಯ ಸೇತುವೆಯಲ್ಲಿ ದೊಡ್ಡ ಗಾತ್ರದ ಗುಂಡಿಯೊಂದು ನಿರ್ಮಾಣವಾಗಿ ಅಪಾಯಕ್ಕೆ ಆಹ್ವಾನ ನೀಡುತ್ತಿತ್ತು.
ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿಯೊಬ್ಬರು ಮರದ ಕೊಂಬೆಗಳನ್ನಿಟ್ಟು ಅಪಾಯ ಇರುವ ಬಗ್ಗೆ ವಾಹನ ಸವಾರರಿಗೆ ಎಚ್ಚರಿಕೆ ನೀಡಿದ್ದರು. ರಸ್ತೆಯಲ್ಲಿ ಗುಂಡಿ ಇರುವ ಬಗ್ಗೆ ಈಟಿವಿ ಪ್ರತಿನಿಧಿ ನೂಜಿಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸದಾನಂದ ಅವರ ಗಮನಕ್ಕೂ ತಂದಿದ್ದರು. ಜಿ.ಪಂ ರಸ್ತೆಯಾದರೂ ಸಾರ್ವಜನಿಕರ ಹಿತದೃಷ್ಟಿಯಿಂದ ಕೂಡಲೇ ಕಾರ್ಯಪ್ರವೃತ್ತರಾದ ಗ್ರಾ.ಪಂ ಅಧಿಕಾರಿಗಳು ಗುಂಡಿಗೆ ಇದೀಗ ತಾತ್ಕಾಲಿಕ ಮುಕ್ತಿ ನೀಡಿದ್ದಾರೆ.