ಕರ್ನಾಟಕ

karnataka

ETV Bharat / state

ಜನಪರ ಮರಳು ನೀತಿ ರೂಪಿಸುವಂತೆ ಸಮಾನ ಮನಸ್ಕ ಸಂಘಟನೆಗಳಿಂದ ಒತ್ತಾಯ

ಬಂಟ್ವಾಳ ತಾಲೂಕು ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿಯು ಜನಪರ ಮರಳು ನೀತಿ ರೂಪಿಸುವಂತೆ ಆಗ್ರಹಿಸಿ ತಹಶೀಲ್ದಾರ್​​​ ಅವರಿಗೆ ಮನವಿ ಸಲ್ಲಿಸಿತು.

ಸಮಾನ ಮನಸ್ಕ ಸಂಘಟನೆಯಿಂದ ಮನವಿ
ಸಮಾನ ಮನಸ್ಕ ಸಂಘಟನೆಯಿಂದ ಮನವಿ

By

Published : Sep 23, 2020, 10:49 AM IST

ಬಂಟ್ವಾಳ: ಜನರಿಗೆ ಕೈಗೆಟುಕುವ ದರದಲ್ಲಿ ಮರಳು ಸಿಗುವಂತಹ ಜನಪರ ಮರಳು ನೀತಿ ರೂಪಿಸುವಂತೆ ಆಗ್ರಹಿಸಿ ಬಂಟ್ವಾಳ ತಾಲೂಕು ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ತಹಶೀಲ್ದಾರ್​ಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಬೂಡ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ ಮಾತನಾಡಿ, ಬಡವರು ಮನೆ ಅಥವಾ ಇನ್ನಿತರೆ ಕಟ್ಟಡ ನಿರ್ಮಿಸಲು ದುಬಾರಿ ಮರಳು ಅಡ್ಡಿಯಾಗುತ್ತಿದೆ. ಸರಿಯಾದ ಮರಳು ನೀತಿಯಿಲ್ಲದೆ ಜನಸಾಮಾನ್ಯರು ಸಂಕಷ್ಟ ಪಡುವಂತಾಗಿದೆ ಎಂದರು.

ಈ ವೇಳೆ ಸಮಿತಿಯ ಅಧ್ಯಕ್ಷ ಪ್ರಭಾಕರ ದೈವಗುಡ್ಡೆ, ಕಾರ್ಯದರ್ಶಿ ಬಿ.ಶೇಖರ್, ಪ್ರಮುಖರಾದ ಹಾರೂನ್ ರಶೀದ್, ಲೋಲಾಕ್ಷ ಶೆಟ್ಟಿ, ಪ್ರಕಾಶ್ ಶೆಟ್ಟಿ ತುಂಬೆ, ಶರೀಫ್ ಮದ್ವ, ಇಸ್ಮಾಲಿ ಅರಬಿ, ಸಮದ್ ಕೈಕಂಬ, ಮಹಮ್ಮದ್ ನಂದಾವರ, ಆರೀಫ್ ಗೂಡಿನ ಬಳಿ, ಸಾಧಿಕ್ ಗೂಡಿನ ಬಳಿ, ಶ್ರೀನಿವಾಸ ಭಂಡಾರಿ, ಪ್ರೇಮನಾಥ ಕೆ. ಸುರೇಶ್ ಬಂಟ್ವಾಳ್ ಉಪಸ್ಥಿತರಿದ್ದರು.

ABOUT THE AUTHOR

...view details