ಬಂಟ್ವಾಳ:ಚಾಲಕನ ನಿಯಂತ್ರಣ ತಪ್ಪಿ ಟ್ರಕ್ ಪಲ್ಟಿಯಾದ ಘಟನೆ ಬಂಟ್ವಾಳ ತಾಲೂಕಿನ ರಾ.ಹೆ.75ರ ನರಹರಿ ಪರ್ವತ ಬಳಿ ಕೃಷ್ಣಕೋಡಿ ಎಂಬಲ್ಲಿ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ಅಕ್ರಮ್ ಬಾಷಾ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬಂಟ್ವಾಳದ ನರಹರಿ ಪರ್ವತ ಬಳಿ ಟ್ರಕ್ ಪಲ್ಟಿ.. ಚಾಲಕ ಸಾವು - ಲಾರಿ ಪಲ್ಟಿಯಾಗಿ ಚಾಲಕ ಸಾವು
ರಾ.ಹೆ.75ರ ನರಹರಿ ಪರ್ವತ ಬಳಿ ಕೃಷ್ಣಕೋಡಿ ಎಂಬಲ್ಲಿ ಲಾರಿ ಪಲ್ಟಿಯಾಗಿದ್ದು, ಗಂಭೀರ ಗಾಯಗೊಂಡ ಚಾಲಕ ಅಕ್ರಮ್ ಬಾಷಾ ಸಾವಿಗೀಡಾಗಿದ್ದಾನೆ.
ಬಂಟ್ವಾಳದ ನರಹರಿ ಪರ್ವತ ಬಳಿ ಟ್ರಕ್ ಪಲ್ಟಿ
ಮಂಗಳೂರಿನಿಂದ ಬೆಂಗಳೂರು ಕಡೆಗೆ ವೈರ್ಗಳನ್ನು ತುಂಬಿಕೊಂಡು ಹೋಗುತ್ತಿದ್ದ ಟ್ರಕ್, ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಗಾಯಗೊಂಡ ಅಕ್ರಮ್ ಬಾಷಾ ಅವರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಮೆಲ್ಕಾರ್ ಸಂಚಾರ ಠಾಣಾ ಪೋಲೀಸರು ಬೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.