ಮಂಗಳೂರು:ನಗರಸಭೆ ಹಾಗೂ ಪಟ್ಟಣ ಪಂಚಾಯತ್ ಚುನಾವಣೆ ಮುಕ್ತಾಯವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 69.45% ಮತದಾನವಾಗಿದೆ.
ಮೂಡುಬಿದಿರೆ ಪುರಸಭೆಯಲ್ಲಿ 67.70%, ಮುಲ್ಕಿ ಪಟ್ಟಣ ಪಂಚಾಯತ್ನಲ್ಲಿ 66.30% ಹಾಗೂ ಸುಳ್ಯ ಪಟ್ಟಣ ಪಂಚಾಯತ್ನಲ್ಲಿ 75.68% ಮತದಾನವಾಗಿದೆ. ಈ ಮೂರೂ ಕಡೆಗಳಲ್ಲೂ ಮಹಿಳೆಯರೇ ಹೆಚ್ಚು ಮತದಾನ ಮಾಡಿದ್ದಾರೆ.
ಅಲ್ಲದೆ ಗ್ರಾಮ ಪಂಚಾಯತ್ನ ಒಟ್ಟು 6 ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆದಿದ್ದು, ಪುತ್ತೂರು, ಪಡುಪೆರಾರ್, ಬೆಳ್ತಂಗಡಿ ಗ್ರಾಮ ಪಂಚಾಯತ್ಗೆ ನಡೆದ ಚುನಾವಣೆಯಲ್ಲಿ ಒಟ್ಟು 61.24% ಮತದಾನವಾಗಿದೆ. ಇಲ್ಲೂ ಮಹಿಳೆಯರ ಮತದಾನವೇ ಅಧಿಕವಾಗಿದೆ.
ಕರಾವಳಿಯಲ್ಲಿ ಸ್ಥಳೀಯ ಚುನಾವಣೆ ಮುಕ್ತಾಯ ಇನ್ನು ಮೇ 31ರಂದು ಮತ ಎಣಿಕೆ ನಡೆಯಲಿದ್ದು, ಆಯಾ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ನಡೆಯುತ್ತದೆ.