ಕರ್ನಾಟಕ

karnataka

ETV Bharat / state

ಯು.ಟಿ.ಖಾದರ್ ಜಾತ್ಯಾತೀತ ಕೋಮುವಾದಿ: ಬಿಜೆಪಿ ವಕ್ತಾರ ಜಿತೇಂದ್ರ ಕೊಟ್ಟಾರಿ

ರಾಜ್ಯದಲ್ಲಿ ಎನ್​ಆರ್​ಸಿ ಜಾರಿಗೊಳಿಸಿದರೆ ರಾಜ್ಯವು ಹೊತ್ತಿ ಉರಿಯಲಿದೆ ಎಂಬ ಯು.ಟಿ. ಖಾದರ್ ಹೇಳಿಕೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸಿದೆ.

BJP spokesperson Jitendra Kothari
ಬಿಜೆಪಿ ವಕ್ತಾರ ಜಿತೇಂದ್ರ ಕೊಟ್ಟಾರಿ

By

Published : Dec 19, 2019, 6:26 PM IST

ಮಂಗಳೂರು:ರಾಜ್ಯದಲ್ಲಿ ಎನ್​ಆರ್​ಸಿ ಜಾರಿಗೊಳಿಸಿದರೆ ರಾಜ್ಯ ಹೊತ್ತಿ ಉರಿಯಲಿದೆ ಎಂಬ ಯು.ಟಿ. ಖಾದರ್ ಹೇಳಿಕೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸಿದೆ.

ಈ ಕುರಿತು ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವಕ್ತಾರ ಜಿತೇಂದ್ರ ಕೊಟ್ಟಾರಿ, ಮಾಜಿ ಸಚಿವ ಯು.ಟಿ. ಖಾದರ್ ಅವರು ಜಾತ್ಯಾತೀತ ಹಣೆಪಟ್ಟಿ ಇರುವ ಕೋಮುವಾದಿ ನಾಯಕ. ಅವರ ಹೇಳಿಕೆಯನ್ನು ಸಂವಿಧಾನ ಪರ ಇರುವ ಮುಸ್ಲಿಮರು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.

ಬಿಜೆಪಿ ವಕ್ತಾರ ಜಿತೇಂದ್ರ ಕೊಟ್ಟಾರಿ

ಕಾಯಿದೆ ಜಾರಿ ವೇಳೆ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಂದು ಖಾದರ್ ಹೇಳುತ್ತಾರೆ. ಜನರಿಂದ ಆಯ್ಕೆಯಾದ ದೇಶದ 350 ಸಂಸದರು ಈ ಕಾಯ್ದೆಯನ್ನು ಬೆಂಬಲಿಸಿದ್ದಾರೆ ಎಂಬುದು ಅವರಿಗೆ ತಿಳಿದಿಲ್ಲ ಎಂದರು.

ABOUT THE AUTHOR

...view details