ಕರ್ನಾಟಕ

karnataka

ETV Bharat / state

ದುಬೈನಿಂದ ಮಂಗಳೂರಿಗೆ ಬಂದ ವ್ಯಕ್ತಿಯಲ್ಲಿ ಇಟಾ ರೂಪಾಂತರಿ ಪತ್ತೆ

ನಾಲ್ಕು ತಿಂಗಳ ಹಿಂದೆ ದುಬೈನಿಂದ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಗೆ ಆಗಮಿಸಿದ್ದ ಕೊರೊನಾ ಸೋಂಕಿತ ವ್ಯಕ್ತಿಯಲ್ಲಿ ಇಟಾ ರೂಪಾಂತರಿ ಪತ್ತೆಯಾಗಿದೆ.

corona
ಇಟಾ ರೂಪಾಂತರಿ

By

Published : Aug 6, 2021, 11:34 AM IST

Updated : Aug 6, 2021, 5:19 PM IST

ಮಂಗಳೂರು: ನಾಲ್ಕು ತಿಂಗಳ ಹಿಂದೆ ದುಬೈನಿಂದ ಮಂಗಳೂರಿಗೆ ಬಂದಿದ್ದ ಕೊರೊನಾ ಸೋಂಕಿತ ವ್ಯಕ್ತಿಯೋರ್ವನಿಗೆ ಇಟಾ ರೂಪಾಂತಾರಿ ಇದ್ದದ್ದು ಜಿನೊಮಿಕ್ ಅಧ್ಯಯನದ ವೇಳೆ ಬೆಳಕಿಗೆ ಬಂದಿದೆ.

ನಾಲ್ಕು ತಿಂಗಳ ಹಿಂದೆ ದುಬೈನಿಂದ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಗೆ ಆಗಮಿಸಿದ್ದರು. ಈ ವ್ಯಕ್ತಿಯನ್ನು ತಪಾಸಣೆಗೆ ಒಳಪಡಿಸಿದಾಗ ಅವರಿಗೆ ಕೊರೊನಾ ವೈರಸ್ ಇರುವುದು ಪತ್ತೆಯಾಗಿತ್ತು. ಬಳಿಕ ಅವರು ಗುಣಮುಖರಾಗಿದ್ದರು. ಆ ಸಂದರ್ಭದಲ್ಲಿ ಅವರ ಸಂಪರ್ಕದಲ್ಲಿದ್ದ 100 ಕ್ಕೂ ಅಧಿಕ ಮಂದಿಯನ್ನು ತಪಾಸಣೆ ನಡೆಸಲಾಗಿತ್ತು.‌ ಬಳಿಕ ಗುಣಮುಖರಾಗಿದ್ದ ವ್ಯಕ್ತಿ ವಿದೇಶಕ್ಕೆ ತೆರಳಿದ್ದರು.

ಜಿನೊಮಿಕ್ ಅಧ್ಯಯನಕ್ಕೋಸ್ಕರ ಆರೋಗ್ಯ ಇಲಾಖೆಯು ಪ್ರಯೋಗಾಲಯಕ್ಕೆ ಮಾದರಿಯನ್ನು ಕಳುಹಿಸಿಕೊಡುತ್ತದೆ. ಆ ಮಾದರಿಯನ್ನು ಪರೀಕ್ಷೆ ನಡೆಸಿದಾಗ ಈ ವ್ಯಕ್ತಿಗೆ ಕೊರೊನಾ ರೂಪಾಂತರಿ ವೈರಸ್ ಇದ್ದದ್ದು ಬೆಳಕಿಗೆ ಬಂದಿದೆ. ಈ ವ್ಯಕ್ತಿಗೆ ಪತ್ತೆಯಾಗಿರುವ ಇಟಾ ರೂಪಾಂತರಿ ವೈರಸ್ ಇಂಗ್ಲೆಂಡ್​ನಲ್ಲಿ ಮೊದಲು ಪತ್ತೆಯಾಗಿತ್ತು. ದೇಶದಲ್ಲಿ ಇಟಾ ರೂಪಾಂತರಿ ಕೊರೊನಾ ವೈರಸ್ ವಿರಳವಾಗಿ ಪತ್ತೆಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪತ್ತೆಯಾದ ಮೊದಲ ಪ್ರಕರಣವಾಗಿದೆ.

ಕಳೆದ ನಾಲ್ಕು ತಿಂಗಳ ಹಿಂದೆ ಸೋಂಕಿತನಾದ ವ್ಯಕ್ತಿಯಲ್ಲಿ ಈ ರೂಪಾಂತರಿ ವೈರಸ್ ಪತ್ತೆಯಾಗಿದೆ. ಕೊರೊನಾ ವೈರಸ್ ಬಗ್ಗೆ ವೈದ್ಯಕೀಯ ಅಧ್ಯಯನಕ್ಕಾಗಿ ನಡೆದ ಪರೀಕ್ಷೆಯಲ್ಲಿ ಈ ರೂಪಾಂತರಿ ಪತ್ತೆಯಾಗಿದ್ದು ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಕಿಶೋರ್ ಕುಮಾರ್ ತಿಳಿಸಿದ್ದಾರೆ.

Last Updated : Aug 6, 2021, 5:19 PM IST

ABOUT THE AUTHOR

...view details