ಕರ್ನಾಟಕ

karnataka

ETV Bharat / state

ಕೇರಳದಿಂದ ರಾಜ್ಯಕ್ಕೆ ಬರುವವರಿಗೆ ಕೊರೊನಾ ಟೆಸ್ಟ್ ಕಡ್ಡಾಯ: ಡಿಸಿ ರಾಜೇಂದ್ರ - ಮಂಗಳೂರು ಡಿಸಿ ರಾಜೇಂದ್ರ ಆದೇಶ

ಕೇರಳ ರಾಜ್ಯದಿಂದ ಉದ್ಯೋಗ, ಶಾಲಾ-ಕಾಲೇಜುಗಳಿಗೆಂದು ಬರುವವರು ಪ್ರತಿ ‌15 ದಿನಗಳಿಗೊಮ್ಮೆ ಆರ್​ಟಿಪಿಸಿಆರ್ ತಪಾಸಣೆ ಕಡ್ಡಾಯವಾಗಿ ನಡೆಸಬೇಕು. ಅಲ್ಲದೆ ಶಾಲಾ-ಕಾಲೇಜು, ಇಂಜಿನಿಯರಿಂಗ್, ವೈದ್ಯಕೀಯ ಕಾಲೇಜುಗಳಲ್ಲಿ ವ್ಯಾಸಂಗ ಮಾಡಲು ನಿತ್ಯ ಗಡಿ ಮೂಲಕ ಸಂಚಾರ ಮಾಡುವ ವಿದ್ಯಾರ್ಥಿಗಳ ಪಟ್ಟಿಯನ್ನು ಆಯಾ ವಿದ್ಯಾಸಂಸ್ಥೆಗಳ ಮುಖ್ಯಸ್ಥರು ಆರೋಗ್ಯ ಇಲಾಖೆಗೆ ನೀಡಬೇಕು. ಅಲ್ಲದೆ ಕೇರಳದಿಂದ ಬಂದು ದ.ಕ.ಜಿಲ್ಲೆಯ ಲಾಡ್ಜ್​ಗಳಲ್ಲಿ ತಂಗುವವರೂ 72 ಗಂಟೆಗಳೊಳಗಿನ ಆರ್​​ಟಿಪಿಸಿಆರ್‌ ವರದಿ ನೀಡಿ ಕೊಠಡಿ ಪಡೆಯಬೇಕು.‌

ಡಿಸಿ ರಾಜೇಂದ್ರ
ಡಿಸಿ ರಾಜೇಂದ್ರ

By

Published : Feb 18, 2021, 12:26 AM IST

ಮಂಗಳೂರು: ಕೇರಳ ರಾಜ್ಯದಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿವಿಧ ಕಾರಣಗಳಿಗೆ ಕಾಸರಗೋಡು ಗಡಿಭಾಗದಿಂದ ದ.ಕ.ಜಿಲ್ಲೆ ಪ್ರವೇಶಿಸುವವರು ಫೆ.22 ರಿಂದ ಕೊರೊನಾ ನೆಗೆಟಿವ್ ಪ್ರಮಾಣ ಪತ್ರ ಕಡ್ಡಾಯವಾಗಿ ಹೊಂದಿರಬೇಕು ಎಂದು ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದರು.

ತಮ್ಮ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ದ.ಕ.ಜಿಲ್ಲೆ ಪ್ರವೇಶಿಸುವ ಎಲ್ಲಾ ಕೇರಳ ರಾಜ್ಯದವರು 72 ಗಂಟೆಗಳೊಳಗಿನ ಆರ್​ಟಿಪಿಸಿಆರ್ ವರದಿ ಕಡ್ಡಾಯವಾಗಿ ಹೊಂದಿರಬೇಕು‌. ಈ ವರದಿ ಇಲ್ಲದವರಿಗೆ ಗಡಿ ಪ್ರವೇಶಿಸಲು ಅವಕಾಶ ನೀಡುವುದಿಲ್ಲ. ಆದರೆ ತುರ್ತುಚಿಕಿತ್ಸೆ ನಿಮಿತ್ತ ಆ್ಯಂಬುಲೆನ್ಸ್ ಮೂಲಕ ಬರುವ ರೋಗಿಗಳು ಹಾಗೂ ಅವರ ಮನೆಯವರಿಗೆ ಗಡಿ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ.‌ ಆದರೆ ಅವರು ಆಯಾ ಆಸ್ಪತ್ರೆಗಳಲ್ಲಿ ಕೊರೊನಾ ತಪಾಸಣೆ ಮಾಡುವುದು ಕಡ್ಡಾಯ ಎಂದು ತಿಳಿಸಿದರು.

ಡಿಸಿ ರಾಜೇಂದ್ರ ಅವರಿಂದ ಮಾಹಿತಿ

ಕೇರಳ ರಾಜ್ಯದಿಂದ ಉದ್ಯೋಗ, ಶಾಲಾ-ಕಾಲೇಜುಗಳಿಗೆಂದು ಬರುವವರು ಪ್ರತಿ ‌15 ದಿನಗಳಿಗೊಮ್ಮೆ ಆರ್​ಟಿಪಿಸಿಆರ್ ತಪಾಸಣೆ ಕಡ್ಡಾಯವಾಗಿ ನಡೆಸಬೇಕು. ಅಲ್ಲದೆ ಶಾಲಾ-ಕಾಲೇಜು, ಇಂಜಿನಿಯರಿಂಗ್, ವೈದ್ಯಕೀಯ ಕಾಲೇಜುಗಳಲ್ಲಿ ವ್ಯಾಸಂಗ ಮಾಡಲು ನಿತ್ಯ ಗಡಿ ಮೂಲಕ ಸಂಚಾರ ಮಾಡುವ ವಿದ್ಯಾರ್ಥಿಗಳ ಪಟ್ಟಿಯನ್ನು ಆಯಾ ವಿದ್ಯಾಸಂಸ್ಥೆಗಳ ಮುಖ್ಯಸ್ಥರು ಆರೋಗ್ಯ ಇಲಾಖೆಗೆ ನೀಡಬೇಕು. ಅಲ್ಲದೆ ಕೇರಳದಿಂದ ಬಂದು ದ.ಕ.ಜಿಲ್ಲೆಯ ಲಾಡ್ಜ್​ಗಳಲ್ಲಿ ತಂಗುವವರೂ 72 ಗಂಟೆಗಳೊಳಗಿನ ಆರ್​​ಟಿಪಿಸಿಆರ್‌ ವರದಿ ನೀಡಿ ಕೊಠಡಿ ಪಡೆಯಬೇಕು.‌

ರಾಜ್ಯದಲ್ಲಿ ಮೊದಲ‌ ಹಾಗೂ ಎರಡನೇ ಹಂತದ ಕೊರೊನಾ ಲಸಿಕಾ ಅಭಿಯಾನ ನಡೆಯುತ್ತಿದ್ದು, ಮುಂಚೂಣಿ ನೌಕರರಿಗೆ ಲಸಿಕೆ ಪಡೆಯಲು ಇನ್ನೆರಡು ದಿನಗಳವರೆಗೆ ಅವಕಾಶ ನೀಡಲಾಗಿದೆ. ಬಾಕಿ ಇರುವವರು ತಕ್ಷಣ ಲಸಿಕೆ ಪಡೆಯಬೇಕು. ಲಸಿಕೆ ಪಡೆಯಲು ನೋಂದಣಿ ಮಾಡಿಕೊಂಡ ಎಲ್ಲರೂ ಎಸ್ಎಂಎಸ್ ಬರಲು‌ ಕಾಯದೆ ಹತ್ತಿರದ ಲಸಿಕಾ ಕೇಂದ್ರಕ್ಕೆ ತೆರಳಿ ಲಸಿಕೆ ಪಡೆಯಬಹುದು.‌ ಲಸಿಕೆ ಪಡೆದವರು ಮದ್ಯಸೇವನೆ ಮಾಡಬಾರದು, ರಕ್ತದೊತ್ತಡ, ಮಧುಮೇಹ ಇದ್ದವರು ಲಸಿಕೆ ಪಡೆದುಕೊಂಡಲ್ಲಿ ಸಮಸ್ಯೆಯಾಗುತ್ತದೆ ಎಂಬ ತಪ್ಪು ಕಲ್ಪನೆಗಳಿವೆ. ಇದನ್ನು ನಂಬಬೇಡಿ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸ್ಪಷ್ಟನೆ‌ ನೀಡಿದರು.

ABOUT THE AUTHOR

...view details