ಕರ್ನಾಟಕ

karnataka

ETV Bharat / state

ಪಶ್ಚಿಮ ವಾಹಿನಿ ನದಿಗೆ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಬಜೆಟ್‌ನಲ್ಲಿ ₹500 ಕೋಟಿ : ಸಚಿವ ಮಾಧುಸ್ವಾಮಿ - construction of Dam Paschima Vahini river

ಕೇಂದ್ರದ 15ನೇ ಹಣಕಾಸು ಯೋಜನೆಯನ್ನು ರಾಜ್ಯಕ್ಕೆ, ಜಿಪಂಗೆ, ಗ್ರಾಪಂಗಳಿಗೆ ಎಂದು ಮೂರು ಭಾಗ ಮಾಡಲಾಗಿದೆ. ಇದನ್ನು ಈಗಾಗಲೇ ಹಂಚಲಾಗಿದೆ. ಆಯಾ ಮಟ್ಟದಲ್ಲಿ ಈ ಕಾರ್ಯ ನಡೆಸಲಾಗುತ್ತಿದೆ..

ಸಚಿವ ಮಾಧುಸ್ವಾಮಿ
ಸಚಿವ ಮಾಧುಸ್ವಾಮಿ

By

Published : Jul 3, 2021, 8:43 PM IST

ಮಂಗಳೂರು :ಪಶ್ಚಿಮ ವಾಹಿನಿ ನದಿಗೆ ಅಲ್ಲಲ್ಲಿ ಕಿಂಡಿ ಅಣೆಕಟ್ಟುಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಅದಕ್ಕಾಗಿ ರಾಜ್ಯದ ಬಜೆಟ್​ನಲ್ಲಿಯೇ 500 ಕೋಟಿ ರೂ. ಇರಿಸಲಾಗಿದೆ ಎಂದು ಸಣ್ಣನೀರಾವರಿ ಇಲಾಖೆ ಸಚಿವ ಜೆ ಮಾಧುಸ್ವಾಮಿ ಹೇಳಿದರು.

ಜೊತೆಗೆ ಅಲ್ಲಿ ಎರಡು ಬೆಟ್ಟಗಳ ಮಧ್ಯೆ ತಳುಕು ಹಾಕುತ್ತಿರುವುದರಿಂದ ಸ್ಥಳೀಯರಿಗೆ ಓಡಾಟ ನಡೆಸಲು 3-4 ಕಿ.ಮೀ ಬಳಸಿಕೊಂಡು ಸಂಚಾರ ನಡೆಸಬೇಕಿತ್ತು‌. ಇದೀಗ ಈ ಕಾಮಗಾರಿ ಮೂಲಕ ಓಡಾಟಕ್ಕೆ ಸುಲಭ ಮಾಡಲು ಕಾಮಗಾರಿ ಕೈಗೊಳ್ಳಲಾಗಿದೆ ಎಂದರು. ಅಡ್ಯಾರ್​ನಲ್ಲಿ‌ 170 ಕೋಟಿ ರೂ. ಪ್ರಾಜೆಕ್ಟ್ ಆರಂಭಿಸಲಾಗಿದೆ.

ಅದೇ ರೀತಿ ಉಳಿದ ಕ್ಷೇತ್ರದಲ್ಲಿ 47 ಕೋಟಿ ರೂ. ಕಾಮಗಾರಿ ಆರಂಭಿಸಲಾಗುತ್ತದೆ. ಈ ಬಗ್ಗೆ ಇಂದು ಶಾಸಕರ ಜತೆ ಚರ್ಚೆ ಮಾಡಲಾಗಿದೆ. ಮುಂದೆ ಯಾವ ರೀತಿ ಈ ಹಣವನ್ನು ವಿನಿಯೋಗಿಸಲಾಗುತ್ತದೆ ಎಂದು ನಿರ್ಧರಿಸಲಾಗುತ್ತದೆ ಅಂತಾ ಹೇಳಿದರು.

ಕೇಂದ್ರದ 15ನೇ ಹಣಕಾಸು ಯೋಜನೆಯನ್ನು ರಾಜ್ಯಕ್ಕೆ, ಜಿಪಂಗೆ, ಗ್ರಾಪಂಗಳಿಗೆ ಎಂದು ಮೂರು ಭಾಗ ಮಾಡಲಾಗಿದೆ. ಇದನ್ನು ಈಗಾಗಲೇ ಹಂಚಲಾಗಿದೆ. ಆಯಾ ಮಟ್ಟದಲ್ಲಿ ಈ ಕಾರ್ಯ ನಡೆಸಲಾಗುತ್ತಿದೆ.

ನಾಲ್ಕು ಹಂತಗಳಲ್ಲಿ ನೇರವಾಗಿ ಹಂಚಲಾಗುತ್ತಿದೆ. ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಕಂದಾಯ ನಷ್ಟದಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ಸಂಗ್ರಹ ಆಗದಿದ್ದರೂ ಎಲ್ಲರಿಗೂ ಈಗಾಗಲೇ ಹಣಕಾಸು ಹ‌ಂಚಲಾಗಿದೆ ಎಂದು ಮಾಧುಸ್ವಾಮಿ ಹೇಳಿದರು.

For All Latest Updates

TAGGED:

ABOUT THE AUTHOR

...view details